ರಾಷ್ಟ್ರೀಯ

ಸೇಲಂ: 19 ವರ್ಷದ ಬಿಕಾಂ ವಿದ್ಯಾರ್ಥಿನಿಯ ಮೇಲೆ ರೇಪ್

Pinterest LinkedIn Tumblr

rapeಸೇಲಂ: ರಾತ್ರಿ ಹೊತ್ತಿನಲ್ಲಿ ಮನೆಗೆ ಮರಳುತ್ತಿದ್ದ 19 ವರ್ಷ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಆರೋಪಿಯೊಬ್ಬ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ.

ಅತ್ಯಾಚಾರವೆಸಗಿದ ನಂತರ ಕತ್ತಲೆಯ ಲಾಭ ಪಡೆದ ಆರೋಪಿ, ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಯ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರೇಪ್‌ಗೊಳಗಾದ ವಿದ್ಯಾರ್ಥಿನಿ ನಮಕ್ಕಲ್ ಜಿಲ್ಲೆಯಲ್ಲಿರುವ ಕಾಲೇಜಿನಲ್ಲಿ ಬಿಕಾಂ ಎರಡನೇ ವರ್ಷದಲ್ಲಿ ಓದುತ್ತಿದ್ದಳು ಎಂದು ಮೂಲಗಳು ತಿಳಿಸಿವೆ.

ಆರೋಪಿ ಕ್ಲೀನರ್ ಕಂ ಬಸ್ ಚಾಲಕನಾಗಿರುವುದು ಸೇರಿದಂತೆ ಕೆಲ ಮಾಹಿತಿಗಳು ಲಭ್ಯವಾಗಿದ್ದರಿಂದ ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Write A Comment