ರಾಷ್ಟ್ರೀಯ

ಮೃತ್ಯುಂಜಯ: ಕೊಳವೆ ಬಾವಿಯಿಂದ ಬದುಕಿ ಬಂದ ಮಗು

Pinterest LinkedIn Tumblr

kolaveದೌಸಾ: ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಿನ್ನೆ ಮಧ್ಯಾಹ್ನ ಕೊಳವೆ ಬಾವಿಯೊಳಗೆ ಬಿದ್ದಿದ್ದ ಎರಡುವರೆ ವರ್ಷದ ಮಗುವನ್ನು ಇಂದು ಮುಂಜಾನೆ ಸುರಕ್ಷಿತವಾಗಿ ಮೇಲೆತ್ತಲಾಗಿದೆ.

ಲಾಲ್‌ಸೊಟ್ ನಗರದ ಬಿಹಾರಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮನೆಯ ಮುಂದೆ ಆಟವಾಡುತ್ತಿದ್ದ ಹೆಣ್ಣುಮಗು ಆಕಸ್ಮಿಕವಾಗಿ ಕೊಳವೆಬಾವಿಯೊಳಗೆ ಬಿದ್ದಿತ್ತು. ಮಗುವನ್ನು ಜ್ಯೋತಿ ಎಂದು ಗುರುತಿಸಲಾಗಿದ್ದು, ಆ ಸಂದರ್ಭದಲ್ಲಿ ಆಕೆಯ ತಾಯಿ ಹತ್ತಿರದ ಹೊಲದಲ್ಲಿ ಕೆಲಸ ಮಾಡುತ್ತಿದ್ದರು.  50 ರಿಂದ 60 ಅಡಿ ಆಳವಿದ್ದ ಕೊಳವೆ ಬಾವಿಯಿಂದ ಮಗುವನ್ನು ಮೇಲೆತ್ತಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ, ಪೊಲೀಸರು ನಿನ್ನೆ ಸಂಜೆಯಿಂದ ಕಾರ್ಯಾಚರಣೆಗಿಳಿದ್ದರು.

ಸಿಸಿ ಕ್ಯಾಮರಾದ ಮಗುವನ್ನು ಮೇಲೆತ್ತುವಲ್ಲಿ ಬಹಳ ಸಹಾಯಕವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Write A Comment