ಕರಾವಳಿ

ಈ ತಿಂಗಳಲ್ಲಿ ಸರಣಿ ರಜೆಯ ಭಾಗ್ಯ ! 5 ದಿನ ಬ್ಯಾಂಕ್ ಚಟುವಟಿಕೆ ಸ್ಥಗಿತ

Pinterest LinkedIn Tumblr

HAPPY-DAY

ಬೆಂಗಳೂರು: ಸೆಪ್ಟೆಂಬರ್‍ನಲ್ಲಿ ಕರ್ನಾಟಕ ಬಂದ್, ಬಕ್ರೀದ್ ಹೇಳಿ ನೌಕರರಿಗೆ ಸರಣಿ ರಜೆ ಸಿಕ್ಕಿತ್ತು. ಈಗ ಅಕ್ಟೋಬರ್‍ನಲ್ಲೂ ಸರಣಿ ರಜೆಯ ಭಾಗ್ಯ ಮುಂದುವರೆಯಲಿದೆ.

ಭಾನುವಾರ, ಎರಡನೇ ಶನಿವಾರ, ನಾಲ್ಕನೇ ಶನಿವಾರದ ಜತೆಗೆ ಅಕ್ಟೋಬರ್ ತಿಂಗಳಲ್ಲಿ ಹಬ್ಬಗಳ ಪ್ರಯುಕ್ತವೂ ರಜೆ ದೊರೆಯಲಿದ್ದು ತಿಂಗಳಲ್ಲಿ 12 ದಿನ ರಜೆ ಸಿಗಲಿದೆ. ಅಕ್ಟೋಬರ್ 2 ರಂದು ಗಾಂಧಿಜಯಂತಿ¬ಂದ ಆರಂಭವಾಗಿ ಅ.27 ರ ಮೊಹರಂವರೆಗೆ ರಜೆ ಸಿಗಲಿದೆ. ಇದರೊಂದಿಗೆ ಆಯುಧಪೂಜೆ, ವಿಜಯದಶಮಿ, ಮಹಾಲಯ ಅಮಾವಾಸ್ಯೆ ಬರುವ ಕಾರಣ ಬಂಪರ್ ರಜೆ ಸಿಗಲಿದೆ.

ಯಾವ ದಿನ ಯಾವುದಕ್ಕೆ ರಜೆ?: ಅಕ್ಟೋಬರ್ 2 ಗಾಂಧಿಜಯಂತಿ, 4 ಭಾನುವಾರ, 10 ಎರಡನೇ ಶನಿವಾರ, 12 ಮಹಾಲಯ ಅಮಾವಾಸ್ಯೆ, 18 ಭಾನುವಾರ, 22 ಆಯುಧಪೂಜೆ, 23 ವಿಜಯದಶಮಿ, 24 ನಾಲ್ಕನೇ ಶನಿವಾರ, 25 ಭಾನುವಾರ, 27 ಮೊಹರಂ ಪ್ರಯುಕ್ತ ರಜೆ ಇರಲಿದೆ.

ಅಕ್ಟೋಬರ್ 26 ರಂದು ಒಂದು ದಿನ ರಜೆ ತೆಗೆದುಕೊಂಡರೆ 21 ರಿಂದ 27 ರವರೆಗೆ ಸರಣಿ ರಜೆಯ ಲಾಭವನ್ನು ನೀವು ಪಡೆದುಕೊಳ್ಳಬಹುದು. ಸರ್ಕಾರಿ ಕಚೇರಿಯ ಜೊತೆಗೆ ಬ್ಯಾಂಕ್‍ಗಳಿಗೂ ರಜೆ ಇರುವುದರಿಂದ ಮೊದಲೇ ಹಣವನ್ನು ಬ್ಯಾಂಕ್‍ಗಳಿಂದ ಡ್ರಾ ಮಾಡುವುದು ಒಳಿತು.

Write A Comment