ದಪ್ಪಗಿದ್ದವರಿಗೆ ಯಾವಾಗಲೂ ಹೇಗಪ್ಪಾ ದೇಹವನ್ನು ಇಳಿಸುವುದು ಎನ್ನುವ ಚಿಂತೆ ಕಾಡುತ್ತಿರುತ್ತದೆ. ಇದಕ್ಕಾಗಿ ಕೆಲ ಮಂದಿ ಹಲವು ಗಂಟೆಗಳ ಕಾಲ ಆಹಾರ ಸೇವಿಸದೇ ಪಥ್ಯ ಮಾಡುತ್ತಿರುತ್ತಾರೆ. ಆದರೆ ಈ ರೀತಿಯ ಪಥ್ಯವನ್ನು ಮಾಡಿದರೆ ದೇಹ ಮಾತ್ರ ಅಲ್ಲ ನಿಮ್ಮ ಆರೋಗ್ಯವು ಕೆಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಸುಲಭವಾಗಿ ದೇಹದ ತೂಕವನ್ನು ಇಳಿಸಲು ಪ್ರತಿದಿನ ತಿನ್ನುವ ಆಹಾರ ಮತ್ತು ಪಾನೀಯಗಳು ಹೇಗಿರಬೇಕು ಎನ್ನುವುದಕ್ಕೆ ಇಲ್ಲಿ ಸರಳ ಸಲಹೆ ನೀಡಲಾಗಿದೆ.
* ಬೆಳಗ್ಗೆ ಎದ್ದ ನಂತರದ ಒಂದು ಗಂಟೆಯೊಳಗೆ ತಿಂಡಿ ಮಾಡುವುದನ್ನು ರೂಢಿಸಿಕೊಳ್ಳಿ.
* ದಿನದಲ್ಲಿ ನಾಲ್ಕು ಮುಖ್ಯ ಸಮತೋಲಿತ ಊಟ ಮಾಡಬೇಕು. ಊಟವಾದ ಎರಡು ಗಂಟೆ ಬಳಿಕ ಸ್ವಲ್ಪ ಸ್ನ್ಯಾಕ್ಸ್ ತೆಗೆದುಕೊಳ್ಳಿ.
* ಸಣ್ಣ ಪ್ರಮಾಣದ ಸ್ನ್ಯಾಕ್ಸ್ ತೆಗೆದುಕೊಂಡ ನಂತರ ವ್ಯಾಯಾಮ ಮಾಡಿ ಊಟ ಮಾಡುವುದು ಒಳ್ಳೆಯದು.
* ಪ್ರತಿ ಒಂದು ಗಂಟೆಗೆ ಒಮ್ಮೆ ಒಂದು ಲೋಟ ನೀರು ಕುಡಿಯಿರಿ.
* ಎಲ್ಲಾ ಎಣ್ಣೆಯಲ್ಲೂ ಶೇ.100ರಷ್ಟು ಕೊಬ್ಬಿನಾಂಶವಿರುತ್ತದೆ. ಹೀಗಾಗಿ ದಿನಕ್ಕೆ 3 ರಿಂದ 4 ಟೀ ಚಮಚ ಮಾತ್ರ ಎಣ್ಣೆಯಿರುವ ಆಹಾರ ಪದಾರ್ಥವನ್ನು ಸೇವಿಸುವುದು ಉತ್ತಮ.
* ಕಾಫಿ, ಟಿ ಇತ್ಯಾದಿ ಪಾನೀಯದಲ್ಲಿ ಸಕ್ಕರೆಯ ಬದಲು ಜೇನುತುಪ್ಪ ಹಾಕಿದರೆ ಬೇಡದ ಕೊಬ್ಬು ಶೇಖರಣೆ ಆಗುವುದಿಲ್ಲ.
* ಜ್ಯೂಸ್, ಮಿಲ್ಕ್ ಶೇಕ್ ಬದಲು ಹಣ್ಣುಗಳನ್ನೆ ತಿನ್ನುವುದು ಆರೋಗ್ಯಕರ.
