ರಾಷ್ಟ್ರೀಯ

ಆತ್ಮಹತ್ಯೆ ಬದಲು ಪೊಲೀಸ ರನ್ನೇ ಕೊಲೆ ಮಾಡಿ: ವಿವಾದಾತ್ಮಕ ಹೇಳಿಕೆ ನೀಡಿದ ಹಾರ್ದಿಕ್‌ ಪಟೇಲ್‌

Pinterest LinkedIn Tumblr

hardik-patel

ಅಹಮದಾಬಾದ್‌(ಪಿಟಿಐ): ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಪೊಲೀಸ ರನ್ನೇ ಕೊಲೆ ಮಾಡಿ ಎಂದು ಪಟೇಲ್‌ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಹಾರ್ದಿಕ್‌ ಪಟೇಲ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

‘ನಿಮಗೆ ಧೈರ್ಯವಿದ್ದರೆ ಹೋಗಿ ಇಬ್ಬರು ಪೊಲೀಸರನ್ನು ಹತ್ಯೆ ಮಾಡಿ. ಪಟೇಲ್‌ ಸಮುದಾಯ ಯಾವತ್ತೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ’ ಎಂದು ಸೂರತ್‌ನಲ್ಲಿ ಹೇಳಿದ್ದಾರೆ.

ಪಟೇಲ್‌ ಸಮುದಾಯದ ಮೀಸ ಲಾತಿ ಹೋರಾಟಕ್ಕೆ ಬೆಂಬಲಿಸಿ ಆತ್ಮಹತ್ಯೆ ಮಾಡಿ ಕೊಳ್ಳುವುದಾಗಿ ವಿಪುಲ್‌ ದೇಸಾಯಿ ಎಂಬ ಯುವಕ ಘೋಷಣೆ ಮಾಡಿದ್ದಕ್ಕೆ ಹಾರ್ದಿಕ್‌ ಪ್ರತಿಕ್ರಿಯಿಸಿದ್ದಾರೆ.

ಸುದ್ದಿವಾಹಿನಿಗಳ ವರದಿಗಾರ ರೊಂದಿಗೆ ದೇಸಾಯಿ ಮನೆಗೆ ತೆರಳಿದ ಹಾರ್ದಿಕ್‌ ನೀಡಿದ ಹೇಳಿಕೆ ವಾಹಿನಿ ಗಳಲ್ಲಿ ಪ್ರಸಾರವಾಗಿದೆ.

Write A Comment