ಮುಂಬೈ

ಇಂದ್ರಾಣಿ ಮುಖರ್ಜಿ ಸ್ಥಿತಿ ಗಂಭೀರ: ಜೆಜೆ ಆಸ್ಪತ್ರೆ ವೈದ್ಯರು

Pinterest LinkedIn Tumblr

Indrani-Mukherjeಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶೀನಾಳ ತಾಯಿ ಇಂದ್ರಾಣಿ ಮುಖರ್ಜಿ ಅವರ ಸ್ಥಿತಿ ಗಂಭೀರವಾಗಿದ್ದು, ಇನ್ನು 48 ಗಂಟೆಗಳ ಕಾಲ ಏನು ಹೇಳಲು ಸಾಧ್ಯವಿಲ್ಲ ಎಂದು ಜೆಜೆ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಇಂದ್ರಾಣಿ ಅವರು ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಕೂಡಲೇ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಷಮ ಸ್ಥಿತಿಯಲ್ಲಿದ್ದ ಇಂದ್ರಾಣಿ ಅವರನ್ನು ಪರೀಕ್ಷಿಸಿದ ವೈದ್ಯರು ಆಕೆಯ ಸ್ಥಿತಿ ಗಂಭೀರವಾಗಿದ್ದು, ಇನ್ನು 48 ಗಂಟೆಗಳ ಕಾಲ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ಜೆಜೆ ಆಸ್ಪತ್ರೆಯ ಡಿನ್ ಡಾ. ಟಿಪಿ ಲಹಾನೆ ಹೇಳಿದ್ದಾರೆ.

ಅಧಿಕ ಪ್ರಮಾಣದ ಔಷಧಿ ಸೇವಿಸಿ ಇಂದ್ರಾಣಿ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದ್ದು, ರಕ್ತ ಪರೀಕ್ಷೆ ನಂತರವಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.

Write A Comment