ಈಗ ಎಲ್ಲೆಲ್ಲಿ ನೋಡಿದರೂ ಇಂದ್ರಾಣಿ ಮುಖರ್ಜಿಯದೇ ಸುದ್ದಿ. ಹಣದಾಸಗೆ ತನ್ನ ಮಗಳು ಶೀನಾಬೋರಾಳನ್ನು ಕೊಲೆ ಮಾಡಿದ ಆಪಾದನೆ ಎದುರಿಸುತ್ತಿರುವ ಇಂದ್ರಾಣಿಯ ವರ್ತನೆಗಳಿಂದ ಮಹಿಳೆಯರು ತಲೆತಗ್ಗಿಸುವಂತಾಗಿದೆ. ಇವಳ ಬದುಕು ಚಿತ್ರ ತಯಾರಕರಿಗೆ ರಸಗವಳ! ಈ ಕಥೆಯನ್ನಿಟ್ಟು ಸಿನಿಮಾ ಮಾಡಲು ಈಗಾಗಲೇ ಸಿದ್ಧತೆ ನಡೆಯುತ್ತಿದೆ. ಪ್ರೀತಿ, ಪ್ರೇಮ, ಸಂಟಿಮೆಂಟ್ , ಅಕ್ರಮ ಸಂಬಂಧ , ಕೊಲೆ ಎಲ್ಲ ಅಂಶಗಳಿಂದ ಕೂಡಿದ ಕಥೆ ತಯಾರಾಗುತ್ತಿದೆ.
ಇಂದ್ರಾಣಿಯಂಥಹ ಹೆಣ್ಣಿನ ಪಾತ್ರದಲ್ಲಿ ಅಭಿನಯಿಸಲು ಯಾರು ತಾನೇ ಮುಂದೆ ಬರುತ್ತಾರೆ ಎಂಬ ಅನುಮಾನ ಬೇಡ. ವಿವಾದಗಳ ರಾಣಿ ಅನ್ನಿಸಿಕೊಂಡಿರುವ ರಾಖಿ ಸಾವಂತ್ ಈ ಪಾತ್ರದಲ್ಲಿ ನಟಿಸಲು ರೆಡಿಯಾಗಿದ್ದಾಳೆ. ವಿವಾದಗಳಲ್ಲಿ ಇವಳಿಗಿಂತ ಒಂದು ಹೆಜ್ಜೆ ಮುಂದಿರುವ ರಾಮಗೋಪಾಲವರ್ಮ ಈ ಚಿತ್ರವನ್ನು ನಿರ್ದೇಶಿಸಬಹುದು. ತಾನು ಸದಾ ಸುದ್ದಿಯಲ್ಲಿರಬೇಕು ಎಂದು ರಾಖಿ ಸಾವಂತ್ ಆಸೆ ಪಡುತ್ತಾಳೆ. ಅಭಿನಯದ ಮೂಲಕ ನ್ಯೂಸ್ ಮಾಡೋಣವೆಂದರೆ ಅದಕ್ಕೆ ಅವಕಾಶವಿಲ್ಲ . ಹಾಗಂತ ಸುಮ್ಮನಿದ್ದು ಬಿಡುವುದೇ… ರಿಯಾಲ್ಟಿ ಷೋಗಳಲ್ಲಿ ಕಾಣಿಸಿಕೊಳ್ಳುವುದು, ವಿವಾದಗ್ರಸ್ತ ಹೇಳಿಕೆ ನೀಡುವುದು ಹೀಗೆ ರಾಖಿ ಸುದ್ದಿ ಮಾಡುತ್ತಾಳೆ.
ಮೊನ್ನೆ ಇವಳು ನೀಡಿದ ಒಂದು ಸಂದರ್ಶನವು ಚರ್ಚೆಗೆ ಗ್ರಾಸವಾಗಿದೆ. ಮಲಗಲು ಹೋಗುವಾಗ ನೀವು ಎಂಥಹ ಡ್ರೆಸ್ ಹಾಕಿಕೊಳ್ಳುತ್ತೀರಿ ಎಂಬ ಪ್ರಶ್ನೆ ಬಂತು. ಅದಕ್ಕೆ ರಾಖಿ ಏನು ಹೇಳಿದಳು ಗೊತ್ತಾ? ‘ಮಲಗುವಾಗ ಮೈಮೇಲೆ ಬಟ್ಟೆ ಹಾಕಿಕೊಳ್ಳೋದು ನನಗಿಷ್ಟವಿಲ್ಲ. ಬೆತ್ತಲೆಯಾಗಿ ಮಲಗ್ತೀನಿ’ಅಂದಳು! ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜತೆ ಪ್ರಣಯದಲ್ಲಿ ತಲ್ಲೀನಳಾಗಿರುವ ಕನಸು ಇವಳಿಗೆ ಬೀಳುತ್ತವೆಯಂತೆ! ಪ್ರಧಾನಿ ನರಂದ್ರಮೋದಿಯವರು ಕೇಂದ್ರ ಸಚಿವೆ ಸ್ಮೃತಿ ಇರಾನಿಯನ್ನು ತೆಗೆದು ಅವರ ಜಾಗದಲ್ಲಿ ತನ್ನ ನೇಮಕ ಮಾಡಿದ ಹಾಗೆ ಕನಸು ಕಂಡಿದ್ದಾಳಂತೆ!
ಇವಳ ಈ ಸಂದರ್ಶನ ಈಗ ಸುದ್ದಿ ಮಾಡುತ್ತಿದೆ.