ರಾಷ್ಟ್ರೀಯ

ಐದು ದಿನಗಳಿಂದ ಚಿನ್ನದ ದರ ಇಳಿಕೆ !

Pinterest LinkedIn Tumblr

gold

ನವದೆಹಲಿ: ಕಳೆದ ಐದು ದಿನಗಳಿಂದ ಚಿನ್ನದ ದರ ಇಳಿಕೆ ಕಾಣುತ್ತಿದ್ದು, 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನದ ದರ ರು. 26,000ರಷ್ಟಾಗಿದೆ.

ಕಳೆದ ವಾರವಷ್ಟೇ ಚಿನ್ನದ ದರ 27 ಸಾವಿರ ಗಡಿ ದಾಟಿತ್ತು. ಈ ಮೂಲಕ ಗ್ರಾಹಕರಲ್ಲಿ ನಿರಾಸೆ ಹೆಚ್ಚಾಗಿತ್ತು. ಅಂತರರಾಷ್ಟ್ರೀಯ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಕಡಿಮೆಯಾಗುತ್ತಿರುವುದರಿಂದ ಗುರುವಾರ 10 ಗ್ರಾಂ ಚಿನ್ನದ ಬೆಲೆ ಕಳೆದ ಒಂದೂವರೆ ತಿಂಗಳಲ್ಲಿಯೇ ಕನಿಷ್ಠ ಪ್ರಮಾಣಕ್ಕೆ ಕುಸಿದಿದೆ.

ದೇಶದ ಪ್ರಮುಖ ಚಿನಿವಾರಪೇಟೆಗಳಲ್ಲಿ 250 ರೂಪಾಯಿಗಳ ಕುಸಿತ ಕಂಡು 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರು. 26,000ಕ್ಕೂ, ಅಪರಂಜಿ ಚಿನ್ನ ರು.26,150ಕ್ಕೆ ಮಾರಾಟವಾಗಿದೆ.

Write A Comment