ಬರೋಬಬ್ಬರಿ 5 ವರ್ಷಗಳ ನಂತರ ಮಾಜಿ ವಿಶ್ವ ಸುಂದರಿ, ನೀಲಿ ಕಂಗಳ ಚೆಲುವೆ ಐಶ್ವರ್ಯಾ ರೈ ಜಝ್ಬಾ ಸಿನಿಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ವಾಪಸ್ಸಾಗಿದ್ದಾರೆ. ಆದ್ರೆ ಸಿನಿಮಾದಲ್ಲಿನ ಐಶ್ವರ್ಯಾ ರೈನ ಕೆಲಸಕ್ಕೆ ಈಗ ಎಲ್ಲಡೆ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಶೂಟಿಂಗ್ ಹಾಗೂ ಮಗಳನ್ನು ಹೇಗೆ ನಿಭಾಯಿಸುತ್ತಿದ್ದರು ಎಂಬುವುದನ್ನು ಹೇಲಿದ್ದಾರೆ. ಯಾವಾಗಲೂ ಅವರು ಕಾರ್ ವ್ಯಾನ್ ಹತ್ತುವಾಗ ಮಗಳಿಗೆ ನಾನು ಬಸ್ ಆಫೀಸ್ ಗೆ ಹೋಗುತ್ತೇನೆ ಎಂದು ಹೇಳುತ್ತಿದ್ದರಂತೆ. ಇನ್ನು ಆರಾಧ್ಯಳ ಆರೋಗ್ಯ ಹದಗೆಟ್ಟಾಗಲೂ ಐಶ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಮಗಳು ಹಾಗೂ ಅಭಿನಯ ಎರಡನ್ನೂ ಸಮರ್ಥವಾಗಿ ನಿಭಾಯಿಸಿದ ಐಶ್ ಬೇಬಿಯನ್ನು ಎಲ್ಲರೂ ಈಗ ಸೂಪರ್ ಮಾಮ್ ಎನ್ನುತ್ತಿದ್ದಾರೆ.
ಇನ್ನು ಸಿನಿಮಾದಲ್ಲಿ ಐಶ್ ನ್ಯಾಯವಾದಿಯಾಗಿ ಕಾಣಿಸಿಕೊಂಡಿದ್ದಾರೆ. ಸಂಜಯ್ ಗುಪ್ತಾ ನಿರ್ದೇಶನದ ಈ ಸಿನಿಮಾ ಈಗಗಾಲೇ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಶಬನಾ ಆಜ್ಮಿ ಹಾಗೂ ಅನುಪಮ್ ಖೇರ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಅಕ್ಟೋಬರ್ 9 ರಂದು ರಿಲೀಸ್ ಆಗಲಿದೆ.