ರಾಷ್ಟ್ರೀಯ

ಬಿಹಾರದಲ್ಲಿ ಆಪ್ ಯಾವ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ: ಸ್ಪಷ್ಟ ಪಡಿಸಿದ ಕೇಜ್ರಿವಾಲ್

Pinterest LinkedIn Tumblr

appನವದೆಹಲಿ; ಬಿಹಾರ್ ಚುನಾವಣೆಯಲ್ಲಿ ಆಪ್ ಜೆಡಿಯುಗೆ ಬೆಂಬಲ ನೀಡುತ್ತಿದೆ ಎಂಬ ವರದಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಳ್ಳಿ ಹಾಕಿದ್ದಾರೆ.

ಇತ್ತೀಚಿಗೆ ತಾವು  ಪಾಟ್ನಾಕ್ಕೆ ಭೇಟಿ ನೀಡಿದ್ದು  ಮತ್ತು ನಿತೀಶ್ ಕುಮಾರ ಅವರೊಂದಿಗೆ ಸಾಕಷ್ಟು ಸಲಿಗೆಯಿಂದಿರುವುದಕ್ಕೆ ತಾವು ಜೆಡಿಯುಗೆ ಬೆಂಬಲ ನೀಡುತ್ತೇವೆ ಎಂಬ ಅರ್ಥವನ್ನು ನೀಡಬೇಡಿ ಎಂದು ಆಪ್ ನಾಯಕ ಹೇಳಿದ್ದಾರೆ.

ಬಿಹಾರದಲ್ಲಿ ನಾನು ಯಾರಿಗೂ ಬೆಂಬಲ ನೀಡುತ್ತಿಲ್ಲ. ನಾನು ಪ್ರಚಾರದ ಉದ್ದೇಶದಿಂದ ಅಲ್ಲಿಗೆ ಹೋಗಿರಲಿಲ್ಲ. ‘ಆಡಳಿತ’ದ ಬಗ್ಗೆ ಬಿಹಾರ್ ಸಿಎಂ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಲು ನಾನು ಪಾಟ್ನಾಕ್ಕೆ ತೆರಳಿದ್ದೆ. ಆಗ ಬಿಹಾರ್ ಚುನಾವಣಾ ದಿನಾಂಕ ಕೂಡ ಘೋಷಣೆಯಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಯು ಆಪ್ ಪಕ್ಷಕ್ಕೆ ಸಮರ್ಥನೆಯನ್ನು ನೀಡಿತ್ತು ಮತ್ತು ವಾರಣಾಸಿಯಲ್ಲಿ ಆಪ್ ನಾಯಕ ಮೋದಿಯವರ ವಿರುದ್ಧ ಕಣಕ್ಕಿಳಿದಾಗ ಸಹ ನಿತೀಶ್ ಕುಮಾರ್ ಅವರ ಪಕ್ಷದಿಂದ ಬೆಂಬಲವನ್ನು ಪಡೆದಿದ್ದರು.

Write A Comment