ರಾಜಕಾರಣಿ ಹೆಚ್.ಎಂ. ರೇವಣ್ಣ ವರ ಮಗ ಅನೂಪ್ ಲಕ್ಷ್ಮಣ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಈ ಸಿನಿಮಾದ ಮೂಲ ಯಾವುದು ಅನ್ನೋದರ ಬಗ್ಗೆ ಸ್ವತಃ ,ಸಿನಿಮಾದ ನಿರ್ದೇಶಕ ಆರ್. ಚಂದ್ರು ಬಾಯ್ಬಿಟ್ಟಿದ್ದಾರೆ. ಈ ಸಿನಿಮಾ 2005ರಲ್ಲಿ ತೆರೆಕಂಡ ಅತನೋಕ್ಕಡೆ ತೆಲುಗು ಸಿನಿಮಾದ ರಿಮೇಕ್ ಅಂತಾ ಚಂದ್ರು ಹೇಳಿದ್ದಾರೆ.
2005ರಲ್ಲಿ ರಿಲೀಸ್ ಆದ ಅತನೋಕ್ಕಡೆ ಸಿನಿಮಾ ತೆಲುಗಿನಲ್ಲಿ ಉತ್ತಮ ಪ್ರದರ್ಸನ ಕಂಡಿತ್ತು. ಕನ್ನಡದಗಲ್ಲಿ ಅನೂಪ್ ಮಾಡುತ್ತಿರುವ ಪಾತ್ರವನ್ನು ತೆಲುಗಿನಲ್ಲಿ ಕಲ್ಯಾಣ ರಾಮ್ ಮಾಡಿದ್ದರು. ರವಿಚಂದ್ರನ್ ಅವರ ಪಾತ್ರವನ್ನು ಪ್ರಕಾಶ್ ರೈ ಅವರು ನಿರ್ವಹಿಸಿದ್ದರು. ಇದೀಗ ಕನ್ನಡದಲ್ಲಿ ಇದೇ ಸಿನಿಮಾ ರಿಮೇಕ್ ಆಗುತ್ತಿದ್ದು ಅಭಿಮಾನಿಗಳಲ್ಲಿ ಕೂತುಹಲ ಹೆಚ್ಚಾಗಿದೆ.
ಇನ್ನು ಈ ಸಿನಿಮಾದಲ್ಲಿ 12 ವರ್ಷಗಳ ಬಳಿಕ ಕ್ರೇಜಿಸ್ಟಾರ್ ಖಾಕಿ ತೊಟ್ಟ ಅಪ್ಪನಾಗಿ ಅಭಿಮಾನಿಗಳ ಮುಂದೆ ಪ್ರತ್ಯಕ್ಷವಾಗುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಸದ್ಯ ಅಂತಿಮ ಹಂತದಲ್ಲಿದ್ದು ಶೀಘ್ರವೇ ಪ್ರೇಕ್ಷ7ರೆದುರಿಗೆ ಬರಲಿದೆ.