ಬಿಹಾರದಲ್ಲಿ ಚುನಾವಣೆ ಕಾವು ಪ್ರಖರವಾಗುತ್ತಿದೆ. ಎಲ್ಲ ಪಕ್ಷಗಳು ವಿಜಯಕ್ಕೆ ಸಕಲ ಕಸರತ್ತುಗಳನ್ನು ಮಾಡುತ್ತಿವೆ. ಇಂತಹ ಮಹತ್ವದ ಸಂದರ್ಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರತಿನಿಧಿಸುವ ಜೆಡಿಯು ಪಕ್ಷದಿಂದ ಕಣಕ್ಕಿಳಿದಿರುವ ಅಭ್ಯರ್ಥಿಯೋರ್ವ ಬಾರ್ ಡ್ಯಾನ್ಸರ್ ಜೊತೆ ಸಾರ್ವಜನಿಕ ವೇದಿಕೆಯಲ್ಲಿ ನೃತ್ಯ ಮಾಡುವ ಮೂಲಕ ಪಕ್ಷಕ್ಕೆ ಇರಿಸುಮುರಿಸುಂಟು ಮಾಡಿದ್ದಾರೆ.
ಗಯಾದಿಂದ ಕಣಕ್ಕಳಿದಿರುವ ಅಭಯ್ ಕುಶ್ವಹಾ ಬಾರ್ ಗರ್ಲ್ ಜತೆ ವೇದಿಕೆಯಲ್ಲಿ ಹೆಜ್ಜೆ ಹಾಕುತ್ತಿರುವಾಗ ಪ್ರೇಕ್ಷಕರು ಸಿಳ್ಳೆ ಹಾಕಿ ಪ್ರೋತ್ಸಾಹಿಸಿದ್ದಾರೆ. ಇವೆಲ್ಲ ದೃಶ್ಯಾವಳಿಗಳು ವೀಡಿಯೋ ಚಿತ್ರೀಕರಣವಾಗಿವೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು ವಿವಾದವನ್ನು ಹುಟ್ಟಿ ಹಾಕಿದೆ.
ಜನಪ್ರತಿನಿಧಿ ಸ್ಥಾನಕ್ಕೆ ಕಣಕ್ಕಿಳಿದಿರುವ ಅಭ್ಯರ್ಥಿ ಅಸಭ್ಯ ಭಂಗಿಯಲ್ಲಿ ಬಾರ್ ಗರ್ಲ್ ಜತೆ ಕುಣಿದಿರುವುದಲ್ಲದೆ ಆಕೆಯ ಮೇಲೆ ಹಣದ ಮಳೆಯನ್ನು ಕೂಡ ಸುರಿದಿದ್ದಾರೆ.
ನರ್ತಕಿಯನ್ನು ಬಳಸಿ ಹಿಡಿಯಲು ಪ್ರಯತ್ನಿಸುತ್ತ ಅವರು ಜಾರಿ ಬೀಳುತ್ತಿರುವುದು ಸಹ ವೀಡಿಯೋದ ಕೊನೆಯಲ್ಲಿ ಕಂಡು ಬಂದಿದೆ.
ಕುಶ್ವಹಾ ವಿರುದ್ಧ ಚುನಾವಣೆ ಆಯೋಗ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.