ರಾಷ್ಟ್ರೀಯ

ತಂಬಾಕು ಉತ್ಪನ್ನಗಳ ಮೇಲೆ ಎಚ್ಚರಿಕೆ ಬರಹ ಗಾತ್ರ ಹಿಗ್ಗಿಸುವುದಕ್ಕೆ ವಿಳಂಬ?

Pinterest LinkedIn Tumblr

Cigarette_packನವದೆಹಲಿ: ಸಿಗರೇಟು ಸೇರಿದಂತೆ ಇನ್ನಿತರ ತಂಬಾಕು ಉತ್ಪನ್ನಗಳ ಮೇಲೆ ಮುದ್ರಿಸಿರುವ ಎಚ್ಚರಿಕೆ ಬರಹಗಳ ಗಾತ್ರವನ್ನು ಹಿಗ್ಗಿಸುವ ಬಗ್ಗೆ ಇರುವ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ.

ತಂಬಾಕು ಉತ್ಪನ್ನಗಳ ಪ್ಯಾಕೆಟ್ ಮೇಲೆ ಶೇ.85 ರಷ್ಟು ದೊಡ್ಡ ಗಾತ್ರದಲ್ಲಿ ಎಚ್ಚರಿಕೆ ಬರಹ ಮುದ್ರಿಸುವ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಂಡಿತ್ತು. ಅದೇ ವೇಳೆ ಈ ನಿರ್ಧಾರವನ್ನು  ಮುಂದಿನ ವರ್ಷ ಏಪ್ರಿಲ್ 1 ರ ನಂತರ ಅನುಷ್ಠಾನಕ್ಕೆ ತರಬೇಕೆಂದು ಆರೋಗ್ಯ ಇಲಾಖೆ ವಿಜ್ಞಾಪನೆಯನ್ನೂ ಹೊರಡಿಸಿತ್ತು.

ಸದ್ಯ, ತಂಬಾಕು ಉತ್ಪನ್ನಗಳ ಪ್ಯಾಕೆಟ್ ಮೇಲೆ ಇರುವ ಎಚ್ಚರಿಕೆ ಬರಹದ ಗಾತ್ರ ಶೇ. 20 ಆಗಿದೆ. ಆದರೆ ಶೇ. 85 ರಷ್ಟು ದೊಡ್ಡ ಗಾತ್ರದಲ್ಲಿ ಎಚ್ಚರಿಕೆ ಬರಹ ಮುದ್ರಿಸಿದರೆ ಅದು ತಂಬಾಕು ವ್ಯವಸಾಯದ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂಬುದನ್ನು ಪರಾಮರ್ಶಿಸಿದ ನಂತರವೇ ನಿರ್ಧಾರವನ್ನು ಅನುಷ್ಠಾನಕ್ಕೆ ತಂದರೆ ಸಾಕು ಎಂದು ಸಂಸತ್ ಸಮಿತಿಯ ಸದಸ್ಯರು ಹೇಳಿದ್ದಾರೆ.

ಆದರೆ ಕೇಂದ್ರ ಸರ್ಕಾರದ ವಿಳಂಬ ನೀತಿಯನ್ನು ತಂಬಾಕು ಉತ್ಪನ್ನಗಳ ವಿರೋಧಿ ಹೋರಾಟಗಾರರು ಪ್ರಶ್ನಿಸಿದ್ದಾರೆ.

ತಂಬಾಕು ಉತ್ಪನ್ನಗಳ ಸೇವನೆಯಿಂದಾಗಿ ಪ್ರತೀ ವರ್ಷ 900,000 ಜನರು ಸಾವಿಗೀಡಾಗುತ್ತಿದ್ದಾರೆ.

Write A Comment