ನೊಯಿಡಾ, ಸೆ.29: ವಿದ್ಯಾಬ್ಯಾಸಕ್ಕಾಗಿ ಹಣ ಸಂಗ್ರಹಣೆಗಾಗಿ ಸಂಜೆಯ ವೇಳೆ ಪುಟ್‍ಪಾತ್ ಮೇಲೆ ತೂಕ ನೋಡುವ ಯಂತ್ರ ಇಟ್ಟುಕೊಂಡು ಕೂರುತ್ತಿದ್ದ ಬಾಲಕನೊರ್ವನಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ 5 ಲಕ್ಷ ರೂ ಸಹಾಯ ಮಾಡಿದ್ದಾರೆ
ಪತ್ರಿಕೆಯೊಂದರಲ್ಲಿ ಬಂದ ವರದಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಾಲಕನ್ನು ತಮ್ಮ ಕಚೇರಿಗೆ ಕರೆಸಿಕೊಂಡು 5 ಲಕ್ಷ ನೆರವು ನೀಡಿದ್ದಾರೆ ಅಲ್ಲದೆ ದೇಶದ ವಿವಿದೆಡೆಯಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದ್ದು ಇದು ಬಾಲಕನ ಶಿಕ್ಷಣಕ್ಕೆ ನೆರವಾಗುತ್ತಿದೆ.ಹೀಗಾಗಿ ಈ ಬಾಲಕ ಇನ್ನು ಮುಂದೆ ಸಂಜೆಯ ಸಮಯದಲ್ಲಿ ತನ್ನ ವಿದ್ಯಾಬ್ಯಾಸಕ್ಕಾಗಿ ಹಣ ಸಂಗ್ರಹಿಸುವ ಅಗತ್ಯವಿಲ್ಲ.
ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ವಿವಿದೆಡೆಯಿಂದ ನೆರವಿನ ಮಹಾಪೂರವೇ ಬರುತ್ತಿರುವ ಹಿನ್ನೆಲೆಯಲ್ಲಿ 9 ನೇ ತರಗತಿಯ ಬಾಲಕ ಹರೇಂದ್ರ ಸಿಂಗ್ ಚೌಹ್ಹಾಣ್ ಸಂತಸ ವ್ಯಕ್ತಪಡಿಸಿದ್ದು,ಮುಖ್ಯಮಂತ್ರಿ ತಂದೆಗೆ ಕೆಲಸ ನೀಡುವ ಭರವಸೆ ನೀಡಿದ್ದಾರೆ.ಹೀಗಾಗಿ ಇನ್ನು ಮುಂದೆ ಯಾರನ್ನೂ ಸಹಾಯ ಕೇಳಲು ಹೋಗುವುದಿಲ್ಲ.ತಂದೆ ನಮ್ಮ ಕುಟುಂಬವನ್ನು ನೋಡಿಕೊಳ್ಳುತ್ತಾರೆ ಎನ್ನುವ ಜವಬ್ದಾರಿ ಇದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹರೇಂದ್ರನ ವಿದ್ಯಾಬ್ಯಾಸದ ಮೇಲುಸ್ತುವಾರಿ ನೋಡಿಕೊಳ್ಳುವಂತೆ ನೋಯಿಡಾದ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೂಚನೆ ನೀಡಿದ್ದಾರೆ.
