ರಾಷ್ಟ್ರೀಯ

ಬಿಹಾರ ಚುನಾವಣೆ: ಬಿಜೆಪಿ ಕ್ರಿಮಿನಲ್‌ಗಳಿಗೆ ಟಿಕೆಟ್ ಮಾರುತ್ತಿದೆ: ಬಿಜೆಪಿ ಸಂಸದ ಆರ್.ಕೆ.ಸಿಂಗ್

Pinterest LinkedIn Tumblr

RKಹೊಸದಿಲ್ಲಿ/ಪಾಟ್ನಾ ಸೆ.26: ಬಿಹಾರ ವಿಧಾನಸಭಾ ಚುನಾವಣೆಗೆ ದಿನ ನಿಗದಿಯಾಗಿರುವಂತೆಯೇ ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆಯ ಕುರಿತು ಸಮಸ್ಯೆ ಆರಂಭವಾಗಿದೆ. ಬಿಜೆಪಿ ಕುಖ್ಯಾತ ಕ್ರಿಮಿನಲ್‌ಗಳಿಗೆ ಪಕ್ಷದ ಟಿಕೆಟ್ ನೀಡುತ್ತಿದೆಯೆಂದು ಬಿಹಾರದ ಅರಾ ಕ್ಷೇತ್ರದ ಬಿಜೆಪಿ ಸಂಸದ ಆರ್.ಕೆ.ಸಿಂಗ್ ಪಕ್ಷದ ನಾಯ ಕತ್ವದ ವಿರುದ್ಧ ಆರೋಪಿಸಿದ್ದಾರೆ.
ಜನಪ್ರಿಯ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಕ್ರಿಮಿನಲ್‌ಗಳಿಗೆ ಟಿಕೆಟ್ ನೀಡಲಾಗುತ್ತಿದೆ. ಪಕ್ಷದ ಕಾರ್ಯಕರ್ತರು ಆಕ್ರೋಶಗೊಂಡರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲವೆಂದು ಅವರು ಹೇಳಿದ್ದಾರೆ.
ಹೊಲಸು ರಾಜಕೀಯ ಆಡುವ ಮೂಲಕ ಬಿಹಾರದಲ್ಲಿ ಪಕ್ಷವು ತನ್ನ ನೆಲೆಯನ್ನು ದುರ್ಬಲಗೊಳಿಸುತಿದೆಯೆಂದು ಆರೋಪಿಸಿದ ಸಿಂಗ್, ಬಿಹಾರದಲ್ಲಿ ‘ಜಂಗಲ್ ರಾಜ್‌ಗಾಗಿ’ ಬಿಜೆಪಿಯು ಆರ್‌ಜೆಡಿ ಹಾಗೂ ಜೆಡಿಯು ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಆದರೆ, ಕುಖ್ಯಾತ ಕ್ರಿಮಿನಲ್‌ಗಳಿಗೆ ಟಿಕೆಟ್ ನೀಡುವ ಮೂಲಕ ಅದು, ನೀತೀಶ್-ಲಾಲು ಮೈತ್ರಿಕೂಟಕಿಂತ ತಾನೇನೂ ಭಿನ್ನವಲ್ಲವೆಂದು ತೋರಿಸಿಕೊಂಡಿದೆಯೆಂದು ಟೀಕಿಸಿದ್ದಾರೆ.
ಅವರು ಕ್ರಿಮಿನಲ್‌ಗಳಿಗೆ ಟಿಕೆಟ್ ನೀಡುತ್ತಿದ್ದಾರೆ. ಅವರು ಕ್ರಿಮಿನಲ್‌ಗಳಿಗೆ ಟಿಕೆಟ್ ನೀಡಿದರೆ, ಲಾಲು ಹಾಗೂ ಬಿಜೆಪಿಯ ನಡುವೆ ಏನು ವ್ಯತ್ಯಾಸ ಉಳಿಯಿತು? ಎಂದವರು ಪ್ರಶ್ನಿಸಿದ್ದಾರೆ.
ಈ ವಿಷಯದಲ್ಲಿ ತಾನು ಬಿಜೆಪಿ ನಾಯಕತ್ವದೊಡನೆ ಮಾತನಾಡಲು ಯತ್ನಿಸಿದೆ. ಸುಶೀಲ್ ಮೋದಿಯವರನ್ನು ಭೇಟಿಯಾಗಲು ಪ್ರಯತ್ನಿಸಿದೆ. ಅವರು ಸಾರ್ವಜನಿಕರಿಗೆ ನ್ಯಾಯ ನೀಡುತ್ತಿಲ್ಲ. ಕ್ರಿಮಿನಲ್‌ಗಳಿಗೆ ಯಾಕೆ ಟಿಕೆಟ್ ನೀಡಲಾಗುತ್ತಿದೆಯೆಂಬ ಕುರಿತು ಅವರು ಸ್ಪಷ್ಟಪಡಿಸಬೇಕೆಂದು ಸಿಂಗ್ ಆಗ್ರಹಿಸಿದ್ದಾರೆ.

Write A Comment