ರಾಷ್ಟ್ರೀಯ

ಹಿಮಾಚಲ ಸಿಎಂ ವೀರಭದ್ರ ಸಿಂಗ್ ನಿವಾಸದ ಮೇಲೆ ಸಿಬಿಐ ದಾಳಿ

Pinterest LinkedIn Tumblr

VBSಶಿಮ್ಲಾ/ಹೊಸದಿಲ್ಲಿ, ಸೆ.26: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ವಿರುದ್ಧದ ಅಕ್ರಮ ಆಸ್ತಿಪಾಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಶನಿವಾರ 11 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.

ವೀರಭದ್ರ ಸಿಂಗ್ ಬೆಳಗ್ಗೆ 7:30ರ ಹೊತ್ತಿಗೆ ತನ್ನ ಎರಡನೆ ಪುತ್ರಿಯ ವಿವಾಹ ಕಾರ್ಯಕ್ರಮದ ಸಂಬಂಧವಾಗಿ ಸಂಕಟ ಮೋಚನ್ ದೇವಾಲಯಕ್ಕೆ ತೆರಳಿದ ಕೆಲವೇ ನಿಮಿಷಗಳಲ್ಲಿ ದಿಲ್ಲಿ, ಶಿಮ್ಲಾ ಮತ್ತು ಇತರ ಕೆಲವು ಸ್ಥಳಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಕೇಂದ್ರ ಯುಪಿಎ ಸರಕಾರದಲ್ಲಿ ಉಕ್ಕು ಖಾತೆಯ ಸಚಿವರಾದ ನಂತರ ಸಿಂಗ್ ಮತ್ತು ಅವರ ಕುಟುಂಬ ಸದಸ್ಯರು 6.1 ಕೋಟಿ ರೂಪಾಯಿ ಮೊತ್ತದ ಅಕ್ರಮ ಆಸ್ತಿಪಾಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧವಾಗಿ ಸಿಬಿಐ ಪ್ರಾಥಮಿಕ ವಿಚಾರಣೆಯನ್ನು ಕೈಗೊಂಡಿತ್ತು. ನಂತರ ಇದನ್ನು ಪ್ರಕರಣವಾಗಿ ಪರಿವರ್ತಿಸಲಾಗಿದ್ದು, ಸ್ಥಳೀಯ ನಿಯೋಜಿತ ನ್ಯಾಯಾಲಯವೊಂದರಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಎಫ್‌ಐಆರ್‌ನಲ್ಲಿ ಸಿಂಗ್, ಅವರ ಪತ್ನಿ ಪ್ರತಿಭಾ ಸಿಂಗ್, ಮಗ ವಿಕ್ರಮಾದಿತ್ಯ ಸಿಂಗ್, ಮಗಳು ಅಪರಾಜಿತ ಸಿಂಗ್ ಮತ್ತು ಎಲ್‌ಐಸಿ ಏಜೆಂಟ್ ಆನಂದ್ ಚೌಹಾಣ್ ಹೆಸರು ದಾಖಲಾಗಿದೆ.
2009-11ರ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದಾಗ ಸಿಂಗ್ ಖಾತೆಗೆ ಅಕ್ರಮ ಸಂಪತ್ತು ಹರಿದು ಬಂದಿದೆ. ಈ ಅವಧಿಯಲ್ಲಿ ಸಿಂಗ್ ಮತ್ತು ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ಎಲ್‌ಐಸಿ ಪಾಲಿಸಿಗಳಲ್ಲಿ 6.1 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

Write A Comment