ಬೆಂಗಳೂರು: ವಿತರಕರೊಬ್ಬರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರ ಮನೆ ಜಪ್ತಿ ಮಾಡುವಂತೆ ಸಿಟಿ ಸಿವಿಲ್ ಕೋರ್ಟ್ ಮಂಗಳವಾರ ಆದೇಶಿಸಿದೆ.
ರಾಜೇಂದ್ರ ಸಿಂಗ್ ಬಾಬು ಅವರು 2012ರಲ್ಲಿ ನವಶಕ್ತಿ ಎಂಟರ್‌ಪ್ರೈಸ್‌ನ ನಾಗರಾಜ್ ಎಂಬುವವರಿಂದ ಮೋಹಿನಿ ಚಿತ್ರದ ವಿತರಣೆಗಾಗಿ 7.5 ಲಕ್ಷ ರುಪಾಯಿ ಮುಂಗಡ ಹಣ ಪಡೆದು ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ನ್ಯಾಯ ಕೇಳಿ ನಾಗರಾಜ್ ಅವರು ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ಕೋರ್ಟ್, ಹಣ ವಾಪಾಸು ನೀಡದ ರಾಜೇಂದ್ರ ಸಿಂಗ್ ಬಾಬು ಅವರ 7, 220,053 ರುಪಾಯಿ ಮೌಲ್ಯದ ಚರ ಆಸ್ತಿ ಜಪ್ತಿ ಮಾಡುವಂತೆ ಆದೇಶ ನೀಡಿದೆ.
ಕೋರ್ಟ್ ಆದೇಶದ ಬಳಿಕ ಚರ ಆಸ್ತಿ ಜಪ್ತಿಗೆ ಬ್ಯಾಂಕ್ ಮತ್ತು ಸಾಲ ನೀಡಿದ ನಾಗರಾಜ್ ಅವರು ಸಂಜಯ್‌ನಗರದಲ್ಲಿರುವ ರಾಜೇಂದ್ರ ಸಿಂಗ್ ಬಾಬು ಅವರ ನಿವಾಸಕ್ಕೆ ಬಂದಿದ್ದು, ಮಾತುಕತೆ ನಡೆಸುತ್ತಿದ್ದಾರೆ.