ಕನ್ನಡ ವಾರ್ತೆಗಳು

ಶಿಕ್ಷಕರ ಜ್ಞಾನ ವರ್ಧನೆಗೆ ನಿರಂತರ ತರಬೇತಿ ಅಗತ್ಯ- ಅಬ್ದುಲ್ಲಾ ಇಬ್ರಾಹಿಂ

Pinterest LinkedIn Tumblr

 carstrt_photo_a

ಮಂಗಳೂರು,ಸೆ.18: ಉಪನ್ಯಾಸಕರು ಕೇವಲ ತರಗತಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸದೆ ಹೊರಜಗತ್ತಿಗೆ ತಮ್ಮನ್ನು ತೆರೆದಿಟ್ಟುಳ್ಳಬೇಕಾಗುತ್ತದೆ. ಈಗಿನ ಆಗು ಹೋಗುಗಳ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ನಿರಂತರ ತರಬೇತಿಹೊಂದಿ ತಮ್ಮ ಜ್ಞಾನವರ್ಧನೆಯನ್ನು ಮಾಡಿಕೊಳ್ಳಬೇಕಾಗುತ್ತದೆ ಎಂದು ಮಂಗಳೂರಿನ ಪಿ.ಎ. ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಅಬ್ದುಲ್ಲಾ ಇಬ್ರಾಹಿಂ ಅಭಿಪ್ರಾಯಪಟ್ಟರು.

ಅವರು ನಗರದ ಸರೋಜಿನಿ ಮಧುಸೂದನ ಕುಶೆ ಪದವಿ ಪೂರ್ವ ಕಾಲೇಜಿನಲ್ಲಿ ದ.ಕ. ಪದವಿ ಪೂರ್ವ ವಾಣಿಜ್ಯ ಶಿಕ್ಷಕರ ಸಂಘದ ಆಶ್ರಯದಲ್ಲಿ ಲೆಕ್ಕ ಶಾಸ್ತ್ರದ ಬಗ್ಗೆ ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಸರೋಜಿನಿ ಮಧುಸೂದನ ಕುಶೆ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಕೆ. ಕೆ. ಉಪಾಧ್ಯಾಯ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ದ.ಕ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆ.ಆರ್. ತಿಮ್ಮಯ್ಯನವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಶ್ಲಾಘಿಸಿ ಶುಭ ಹಾರೈಸಿದರು. ಸಂಘದ ಅಧ್ಯಕ್ಷರಾದ ಶ್ರೀಮತಿ ಭಾರತಿಯವರು ಪ್ರಾಸ್ತಾವಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಸಮೀವುಲ್ಲಾ ಧನ್ಯವಾದ ಸಮರ್ಪಿಸಿದರು. ಕೋಶಾಧಿಕಾರಿ ಶ್ರೀಮತಿ ಸವಿತಾ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ರಾವ್, ಮುಖ್ಯ ಸಲಹೆಗಾರರಾದ ಎ.ಟಿ. ಗಿರೀಶ್ಚಂದ್ರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ದಿವಾಕರ ಭಟ್, ರಾಜ್ಯ ಪ್ರಶಸ್ತಿ ವಿಜೇತ ಉಪನ್ಯಾಸಕಿ ಶ್ರೀಮತಿ ಭಾರತೀ ಬಾ, ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದ ಕು. ರಶ್ಮಿತಾ ಇವರುಗಳನ್ನು ಸನ್ಮಾನಿಸಲಾಯಿತು.

Write A Comment