ಬೆಂಗಳೂರು, ಸೆ. 16: ಹಿಂಸೆ, ಕ್ರೌರ್ಯ, ದೌರ್ಜನ್ಯ, ಕೋಮುವಾದ, ಭಯೋತ್ಪಾ ದನೆಯನ್ನು ನಿಯಂತ್ರಿಸಲು ಹಾಗೂ ದೇಶದಲ್ಲ್ಲಿ ಶಾಂತಿಯನ್ನು ಸ್ಥಾಪಿಸಲು ಒಕ್ಕೊರಲಿನಿಂದ ಹೋರಾಟ ಮಾಡಬೇಕಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ ಮತ್ತು ವಕೀಲ ಬಿ.ಟಿ. ವೆಂಕಟೇಶ್ ಹೇಳಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ಕರ್ನಾಟಕ ವಲಯ ಹಮ್ಮಿಕೊಂ ಡಿದ್ದ ಪತ್ರಿಕಾಗೋಷ್ಠಿಯಲ್ಲಿ ಟೆರರ್‌ಫ್ರೀ ಇಂಡಿಯಾ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸಾಂಪ್ರದಾ ಯಿಕವಾಗಿ ಮುಸ್ಲಿಮ್ ಬಾಂಧವರು ಗಡ್ಡವನ್ನು ಬಿಟ್ಟರೆ ಭಯೋತ್ಪಾದಕನ ಪ್ರತಿರೂಪ ಎಂದು ಸಮಾಜ ಗುರುತಿಸು ತ್ತಿದೆ, ಇಸ್ಲಾಮ್ ಸಮುದಾಯವನ್ನು ಭಯೋ ತ್ಪಾದಕರಂತೆ ನೋಡುತ್ತಿದೆ ಎಂದು ಆರೋಪಿ ಸಿದರು.
ದೇಶದಲ್ಲಿ ಪ್ರಭಾವಿಗಳು ವ್ಯವಸ್ಥಿತವಾಗಿ ಭಯೋತ್ಪಾದನೆ ಕೃತ್ಯಗಳನ್ನು ಎಸಗುತ್ತಿದ್ದಾರೆ, ಈ ಪ್ರಕರಣಗಳಲ್ಲಿ ಅಮಾಯಕ ಮುಸ್ಲಿಮ್ ಯುವಕರನ್ನು ಬಲಿಪಶು ಮಾಡುತ್ತಿದ್ದಾರೆ ಎಂದ ಅವರು, ಮುಸ್ಲಿಮ್ ಆರೋಪಿಗಳನ್ನು ಪೊಲೀಸರು ಭಯೋತ್ಪಾದಕರಂತೆ ಉಪಚರಿ ಸುತ್ತಿದ್ದಾರೆ ಎಂದು ದೂರಿದರು.
ಮೊದಲು ಇರಾನ್ ಮತ್ತು ಇರಾಕ್ ದೇಶಗಳು ದೇಶ ರಕ್ಷಣೆಗಾಗಿ ಭಯೋತ್ಪಾದಕ ಸಂಘಟನೆಗಳನ್ನು ಬಲಪಡಿಸಿದರು, ಆದರೆ ಈಗ ಈ ಸಂಘಟನೆಗಳು ವಿಷವನ್ನು ಉಗುಳುತ್ತಿದ್ದು, ಈ ದೇಶಗಳಿಗಲ್ಲದೆ ವಿಶ್ವದ ಉಳಿದ ದೇಶಗಳಿಗೂ ನುಂಗಲಾರದ ತುತ್ತಾಗಿ ಪರಿಣಮಿಸಿವೆ ಎಂದು ತಿಳಿಸಿದರು.
ಜನಸಾಮಾನ್ಯರಲ್ಲಿ ಭಯವನ್ನು ಹುಟ್ಟಿಸುವ ಯಾವುದೇ ಕೃತ್ಯ ಭಯೋತ್ಪಾದನೆ ಯಾಗಿದೆ. ಮಹಾತ್ಮಾಗಾಂಧಿ, ನರೇಂದ್ರ ದಾಬೋಲ್ಕರ್, ಎಂ.ಎಂ. ಕಲಬುರ್ಗಿ ಅವರನ್ನು ಹತ್ಯೆ ಮಾಡಿದವರೂ ಭಯೋತ್ಪಾ ದಕರೇ ಆಗಿದ್ದಾರೆ. ಭಯೋತ್ಪಾದನೆಯನ್ನು ಇಸ್ಲಾಮೋಫೋಬಿಯಾ ಎಂದು ಅಂತಾರಾಷ್ಟ್ರೀಯ ತಾಳಕ್ಕನುಸಾರವಾಗಿ ವ್ಯಾಖ್ಯಾನಿಸಲಾಗುತ್ತಿದೆೆ ಎಂದು ಹೇಳಿದ ಅವರು, ಉಗ್ರವಾದದ ಮೂಲವನ್ನು ಮತ್ತು ಅದಕ್ಕೆ ಪ್ರೇರಣೆ ನೀಡುವ ವ್ಯವಸ್ಥೆಯನ್ನು ನಾಶಮಾಡಿದಾಗ ಮಾತ್ರ ಭಯೋತ್ಪಾದನೆ ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು. ಎಸ್‌ಐಒ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಮಾತನಾಡಿ, ಭಯೋತ್ಪಾದನೆ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತಿದ್ದು, ತಡೆಯುವಲ್ಲಿ ಸರಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.
ಭಯಮುಕ್ತ ಭಾರತ ಅಭಿಯಾನಕ್ಕೆ ಚಾಲನೆ
ಭಯಮುಕ್ತ ಭಾರತ ಅಭಿಯಾನಕ್ಕೆ ಇಂದು ಪ್ರೆಸ್‌ಕ್ಲಬ್‌ನಲ್ಲಿ ಬಿ.ಟಿ ವೆಂಕಟೇಶ್ ಚಾಲನೆ ನೀಡಿದರು. ಶಾಂತಿ, ಸೌಹಾರ್ದ, ಸಾಮರಸ್ಯದಿಂದ ಪರಸ್ಪರ ತಮ್ಮ ತಮ್ಮ ವಿಚಾರಧಾರೆಗಳ ಮಧ್ಯೆ ಇರುವ ಭಿನ್ನತೆಯೊಂದಿಗೆ ಏಕತೆ ಪ್ರದರ್ಶಿಸಲು ಮತ್ತು ಭಯೋತ್ಪಾದನೆಯನ್ನು ಹೋಗ ಲಾಡಿಸುವ ನಿಟ್ಟಿನಲ್ಲಿ ಭಯಮುಕ್ತ ಭಾರತ ಅಭಿಯಾನವನ್ನು ಹಮ್ಮಿಕೊಂಡಿರುವುದಾಗಿ ಸಂಘಟನೆ ತಿಳಿಸಿದೆ.
ಅಭಿಯಾನವನ್ನು ರಾಜ್ಯಾದ್ಯಂತ ಎರಡು ತಿಂಗಳ ಕಾಲ ಹಮ್ಮಿಕೊಂಡಿದ್ದು ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಉಪನ್ಯಾಸ, ಪತ್ರಿಕಾ ಗೋಷ್ಠಿ, ಚಲನಚಿತ್ರ ಪ್ರದರ್ಶನ ಹಾಗೂ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಲಬೀದ್ ಶಾಫಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಖ್ಯಾತ ವಕೀಲ ಬ್ಯಾತ ಜಗದೀಶ್, ಕರ್ನಾಟಕ ಮುಸ್ಲಿಮ್ ಪತ್ರಿಕೆಯ ಸಂಪಾದಕ, ಎಪಿಸಿಆರ್‌ನ ಸಂಚಾಲಕ ಇರ್ಶಾದ್ ಅಹ್ಮದ್ ದೇಸಾಯಿ, ಎಸ್‌ಐಒ ರಾಷ್ಟ್ರೀಯ ಕಾರ್ಯ ದರ್ಶಿ ತೌಸೀಫ್ ಅಹ್ಮದ್ ಮಡಿಕೇರಿ ಮತ್ತಿತರರಿದ್ದರು.