ರಾಷ್ಟ್ರೀಯ

ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಬೆದರಿಕೆ ಹಾಕಿದ 150ಕ್ಕೂ ಹೆಚ್ಚು ಬ್ರಾಹ್ಮಣರು ! ಏಕಾಗಿ ಬೆದರಿಕೆ ಹಾಕಿದರೂ ಎಂಬುದು ಇಲ್ಲಿದೆ ನೋಡಿ…

Pinterest LinkedIn Tumblr

brahmins

ಬಾಘ್’ಪತ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಾಘ್’ಪತ್ ಜಿಲ್ಲೆಯ ಸಿಂಘವಾಲಿ ಆಹಿರ್ ಗ್ರಾಮದ ಸುಮಾರು 150ಕ್ಕೂ ಹೆಚ್ಚು ಮಂದಿ ಬ್ರಾಹ್ಮಣ ಸಮುದಾಯದ ಜನರು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಅಧಿಕಾರಿಗಳ ಬಳಿ ಬೆದರಿಕೆ ಒಡ್ಡಿರುವುದಾಗಿ ಬುಧವಾರ ತಿಳಿದುಬಂದಿದೆ.

ಸೆ.8ರಂದು ಗ್ರಾಮದ ಬ್ರಾಹ್ಮಣ ಹುಡುಗಿಯೊಬ್ಬಳನ್ನು ದಲಿತ ಸಮುದಾಯದ ಯುವಕನವೊಬ್ಬ ಅಪಹರಿಸಿದ್ದಾನೆಂದು ಆರೋಪಿಸಿರುವ ಬ್ರಾಹ್ಮಣರು ಅಪಹರಣ ಕುರಿತಂತೆ ಪೊಲೀಸರ ಬಳಿ ದೂರು ನೀಡಿದ್ದಾರೆ. ದೂರು ನೀಡಿ ಹಲವು ದಿನಗಳಗಾದರೂ ಯುವತಿ ಪತ್ತೆಯಾಗದಿರುವುದಕ್ಕೆ ಕೆಂಡಾಮಂಡಲವಾಗಿರುವ ಬ್ರಾಹ್ಮಣ ಸಮುದಾಯದ ಜನರು ನಿನ್ನೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿದ್ಯಾ ಸಾಗರ್ ಮಿಶ್ರಾರನ್ನು ಭೇಟಿ ಮಾಡಿದ್ದಾರೆ.

ಸುಮಾರು 150ಕ್ಕೂ ಹೆಚ್ಚು ಬ್ರಾಹ್ಮಣರು ನನ್ನನ್ನು ಭೇಟಿ ಮಾಡಲೆಂದು ಕಚೇರಿ ಬಳಿ ಬಂದು ಧರಣಿ ನಡೆಸಿದರು. ಈ ವೇಳೆ ತಮ್ಮ ಸಮುದಾಯದ ಯುವತಿಯೋರ್ವಳನ್ನು ದಲಿತ ಯುವಕನೊಬ್ಬ ಸೆ.8ರಂದು ಅಪಹರಿಸಿದ್ದು, ಆಕೆಯನ್ನು ಹುಡುಕಿ ಕರೆತರುವುದಾಗಿ ಒತ್ತಾಯಿಸಿದ್ದರು. ಅಲ್ಲದೆ, ಒಂದು ವೇಳೆ ಯುವತಿಯನ್ನು ಕರೆತರದಿದ್ದರೆ ಸಮುದಾಯದ ಎಲ್ಲಾ ಬ್ರಾಹ್ಮಣರು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಬೆದರಿಕೆಯೊಡ್ಡಿದರು ಎಂದು ವರಿಷ್ಠಾಧಿಕಾರಿ ಹೇಳಿಕೊಂಡಿದ್ದಾರೆ.

Write A Comment