ಬಾಗ್ದಾದ್: ಮಕ್ಕಳನ್ನು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತರಬೇತಿ ನಿಡಲು, ತಮ್ಮ ವಶದಲ್ಲಿರುವ ಇರಾಕಿನ ನಗರ ಮೋಸುಲ್ ನಿಂದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ 127 ಮಕ್ಕಳನ್ನು ಅಪಹಸಿದೆ ಎಂದು ಮಾಧ್ಯಮವೊಂದು ಮಂಗಳವಾರ ವರದಿ ಮಾಡಿದೆ.
ಕಳೆದ ಕೆಲವು ದಿನಗಳಲ್ಲಿ ಇಸ್ಲಾಮಿಕ್ ಸ್ಟೇಟ್ ೧೧ ರಿಂದ ೧೫ ವರ್ಷದ ಒಳಗಿನ 127 ಮಕ್ಕಳನ್ನು ಅಪಹರಿಸಿದೆ ಎಂದು ಕುರ್ದಿಸ್ತಾನ್ ಡೆಮಾಕ್ರೆಟಿಕ್ ಪಕ್ಷದ ಅಧಿಕಾರಿ ಸಯದ್ ಮಮೌಜಿನಿ ತಿಳಿಸಿದ್ದಾರೆ ಎಂದು ಇರಾಕಿ ನ್ಯೂಸ್ ವರದಿ ಮಾಡಿದೆ.
ಶಸ್ತ್ರಾಸ್ತ್ರ ಬಳಕೆ ಮತ್ತು ಭಯೋತ್ಪಾದನ ಚಟುವಟಿಕೆಗಳನ್ನು ನಡೆಸುವ ತರಬೇತಿ ನೀಡುವ ವಿವಿಧ ವಿಶೇಷ ಶಿಬಿರಗಳಿಗೆ ಮಕ್ಕಳನ್ನು ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
