ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ಕದ್ರಿ ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿಯ 46ನೇ ವರ್ಷದ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಕದ್ರಿ ಕ್ರಿಕೆಟರ್ಸ್ ಕ್ಲಬ್ ವತಿಯಿಂದ ರಿಥಮಿಕ್ ನೈಟ್ – 2015 ಕಾರ್ಯಕ್ರಮ ಬಾನುವಾರ ಸಂಜೆ ಕದ್ರಿ ಮಲ್ಲಿಕಟ್ಟೆಯ ಮೈದಾನದಲ್ಲಿ ಜರಗಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಜೆ.ಆರ್. ಲೋಬೊ, ಬಿ.ಎ. ಮೊದಿನ್ ಬಾವಾ, ಮಕ್ಕಳ ಹಕ್ಕುಗಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಕೃಪಾ ಅಮರ್ ಆಳ್ವ ಮುಂತಾದವರು ಮುಖ್ಯ ಅತಿಥಿಗಳಾಗಿದ್ದರು.
ಎ.ಜೆ. ಸಮೂಹ ಸಂಸ್ಥೆಯ ಅಧ್ಯಕ್ಷ ಎ.ಜೆ. ಶೆಟ್ಟಿ, ಮಹಾನಗರ ಪಾಲಿಕೆ ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ, ಪಾಲಿಕೆಯ ಪ್ರತಿಪಕ್ಷ ನಾಯಕ ಸುಧೀರ್ ಶೆಟ್ಟಿ ಕಣ್ಣೂರು, ಕಾರ್ಪೊರೇಟರ್ಗಳಾದ ಅಶೋಕ್ ಕುಮಾರ್ ಡಿ.ಕೆ., ರೂಪಾ ಡಿ. ಬಂಗೇರ, ಕದ್ರಿ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ದಿನೇಶ್ ದೇವಾಡಿಗ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಮೋಹನ್ ಕೊಪ್ಪಳ ಕದ್ರಿ, ಉದ್ಯಮಿಗಳಾದ ಲಕ್ಷ್ಮೀಶ ಭಂಡಾರಿ, ಸಂದೀಪ್ ಶೆಟ್ಟಿ, ರತ್ನಾಕರ ಜೈನ್, ಗೋಕುಲ್ ಕದ್ರಿ, ಕರ್ಣಾಟಕ ಬ್ಯಾಂಕಿನ ಎಜಿಎಂ ಶ್ರೀನಿವಾಸ್ ದೇಶಪಾಂಡೆ, ಎಂಎಸ್ಇಝಡ್ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಮಚಂದ್ರ ಭಂಡಾರ್ಕರ್, ಕದ್ರಿ ಕ್ರಿಕೆಟರ್ ಕ್ಲಬ್ನ ಅಧ್ಯಕ್ಷ ಸೂರಜ್ ಕೆ. ಶೇಟ್, ಪ್ರಧಾನ ಕಾರ್ಯದರ್ಶಿ ಗಂಗಾಧರ್ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಡೆದ “ರಿಥಮಿಕ್ ನೈಟ್ – 2015” ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಚಲನ ಚಿತ್ರ ನಿರ್ದೇಶಕ, ನಿರ್ಮಾಪಕ ಹಾಗೂ ಖ್ಯಾತ ನಟ ಕ್ರೇಝಿಸ್ಟಾರ್ ರವಿಚಂದ್ರನ್, ಕನ್ನಡ ಮತ್ತು ಹಿಂದಿ ಚಿತ್ರ ರಂಗದ ಹಿನ್ನೆಲೆ ಗಾಯಕರು, ಟಿ.ವಿ. ಲಿಟ್ಲ ಚಾಂಪ್ಸ್ ವಿಜೇತ ಮಾ| ಗಗನ್ ಗೋಂಕರ್, ಹಿನ್ನೆಲೆ ಗಾಯಕರಾದ ಶಮಿತಾ ಮಾಲ್ನಾಡ್ಡ್, ಡಾ. ಸಂಗೀತಾ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಚಿತ್ರ ನಿರ್ದೇಶಕ ಯಜ್ಞೆಶ್ ಶೆಟ್ಟಿ ಮೊದಲಾದವರು ಪಾಲ್ಗೊಂಡು ಸಂಗೀತಾ ಪ್ರಿಯರನ್ನು ರಂಜಿಸಿದರು.









































































