ಬೆಂಗಳೂರು.ಸೆ.2: ನಟ ಕಿಚ್ಚ ಸುದೀಪ್ ಅವರಿಗೆ ಇಂದು ಹುಟ್ಟುಹಬ್ಬ ಸಂಭ್ರಮ. ಜೆ.ಪಿ ನಗರದಲ್ಲಿರುವ ನಿವಾಸದಲ್ಲಿ ಅಭಿಮಾನಿಗಳು,ಆಪ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ನೆಚ್ಚಿನ ನಟನಿಗೆ ಶುಭಕೋರಲು ರಾಜ್ಯದ ವಿವಿದೆಡೆಯಿಂದ ರಾತ್ರಿಯಿಂದಲೇ ಅವರ ನಿವಾಸದಲ್ಲಿ ಅಭಿಮಾನಿಗಳು ಜಾತ್ರೆಯೇ ತುಂಬಿ ತುಳುಕುತ್ತಿತ್ತು. ಅಭಿಮಾನಿಗಳ ಕಾತರಕ್ಕೆ ತಣ್ಣೀರೆರಚದ ಸುದೀಪ್ ಅಭಿಮಾನಿಗಳ ಶುಭಾಶಯ ಸ್ವೀಕರಿಸಿದ ಸುದೀಪ್. ಕಿಚ್ಚನ ಹುಡುಗರ ಸಂಘಟನೆಯೊಂದು ತಂದಿದ್ದ 42 ಕೆ.ಜಿ ತೂಕದ ಕೇಕ್ ಕತ್ತರಿಸಿ, ಅಭಿಮಾನಿಗಳು ತಂದಿದ್ದ ಕನಕಾಂಬರ ಹಾಗೂ ಮಲ್ಲಿಗೆಯಿಂದ ತಯಾರಾಗಿದ್ದ ಬೃಹತ್ ಹಾರ ಹಾಕಿಸಿಕೊಂಡು ಅವರನ್ನು ಖುಷಿಪಡಿಸಿದರು.
ಬಳಿಕ ಮಾತನಾಡಿದ ಸುದೀಪ್, ನನ್ನ ಹುಟ್ಟುಹಬ್ಬಕ್ಕೆ ಸಾಕಷ್ಟು ಜನ ತುಂಬಾ ಬರುತ್ತಿದ್ದಾರೆ ಎನ್ನುವುದು ಗರ್ವ ಅಲ್ಲ. ಜನರ ಪ್ರೀತಿ ಸಂಪಾದನೆ ಮಾಡಿಕೊಂಡು ಬಂದಿದ್ದೇನೆ. ನನ್ನ ಬ್ಯಾಂಕ್ ಬ್ಯಾಲೆನ್ಸ್‍ಗಿಂತ ಜನರ ಪ್ರೀತಿ ಜಾಸ್ತಿ ಇದೆ ಎಂದರು.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಿವಾಸದೆದುರು ಸುದೀಪ್ ಕಟೌಟ್‍ಗಳು ಹಾಗೂ ಬ್ಯಾನರ್‍ಳನ್ನು ಹಾಕಲಾಗಿದ್ದು, ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭಾಶಯ ಕೋರಲು ಅಭಿಮಾನಿಗಳು ಮುಂಜಾನೆಯಿಂದಲೇ ಕ್ಯೂ ನಿಂತು ಶುಭಾಶಯ ಹೇಳುತ್ತಿದ್ದಾರೆ.
