ಕನ್ನಡ ವಾರ್ತೆಗಳು

ಉಡುಪಿ: ಭಾರತ್ ಬಂದ್ ಗೆ ಜಿಲ್ಲಾದ್ಯಂತ ಉತ್ತಮ ಪ್ರತಿಕ್ರಿಯೆ: ಬಸ್, ಆಟೋ ರಿಕ್ಷಾ ಇಲ್ಲ

Pinterest LinkedIn Tumblr

Bharath bandh

ಉಡುಪಿ: ದೇಶದ 10 ಕಾರ್ಮಿಕ ಸಂಘಟನೆಗಳು ಇಂದು (ಬುಧವಾರ) ಕರೆ ನೀಡಿರುವ ದೇಶವ್ಯಾಪಿ ಬಂದ್ ಗೆ ಉಡುಪಿ ಜಿಲ್ಲಾದ್ಯಂತ  ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಉಡುಪಿ, ಕುಂದಾಪುರ, ಬೈಂದೂರು, ಕಾಪು ಹಾಗೂ ಕಾರ್ಕಳ ಸೇರಿದಂತೆ ಹಲವೆಡೆಗಳಲ್ಲಿ ಖಾಸಗಿ ಮತ್ತು ಸರಕಾರಿ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇನ್ನು ಖಾಸಗಿ ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳು ಕೂಡ ರಸ್ತೆಗಿಳಿಯದ ಕಾರಣ ಬೆಳಗ್ಗೆ ಪ್ರಯಾಣಿಕರು ಪರದಾಡುವಂತಾಗಿದೆ. ಬಸ್ಸುಗಳಿಲ್ಲದ ಕಾರಣ ಬಹುತೇಕ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಸಾಧ್ಯತೆಯೂ ಇದೆ.

ಹಲವೆಡೆ ಟ್ರಕ್ಕುಗಳು, ಲಾರಿಗಳನ್ನು ತಡೆಯುವ ಮೂಲಕ ಬಂದಿಗೆ ಬೆಂಬಲ ಸೂಚಿಸಲು ಕೋರಲಾಗುತ್ತಿದೆ. ಅಂಗಡಿ ಮುಂಗಟ್ಟುಗಳು ಕೂಡ ಸ್ವಯಂಪ್ರೇರಿತವಾಗಿ ಮುಚ್ಚುವ ಸಂಭವವಿದೆ.

ಬೇಡಿಕೆ ಏನೇನು?

– ಕನಿಷ್ಠ 15 ಸಾವಿರ ರೂ. ಮಾಸಿಕ ವೇತನ ನೀಡಬೇಕು
– ಎಲ್ಲ ರೀತಿಯ ದುಡಿಯುವ ವರ್ಗಕ್ಕೂ ಕನಿಷ್ಠ 3 ಸಾವಿರ ರೂ. ಪಿಂಚಣಿ ಕೊಡಬೇಕು
– ಕಾರ್ಮಿಕ ಕಾನೂನಿಗೆ ತರಲುದ್ದೇಶಿಸಿರುವ ತಿದ್ದುಪಡಿಗಳನ್ನು ಕೈಬಿಡಬೇಕು
– ಸರ್ಕಾರಿ ಕಂಪನಿಗಳಿಂದ ಬಂಡವಾಳ ಹಿಂತೆಗೆತ, ಖಾಸಗೀಕರಣ ನಿಲ್ಲಿಸಬೇಕು
– ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಉದ್ಯೋಗ ಖಾತ್ರಿ ಒದಗಿಸಬೇಕು, ವಸತಿ ಹಕ್ಕು ನೀಡಬೇಕು
– ದೇಶದ ಪ್ರತಿ ಜಿಲ್ಲೆಯಲ್ಲೂ ವಿಚಕ್ಷಣ ಸಮಿತಿ ರಚಿಸಬೇಕು
– ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು
– ಉದ್ಯೋಗ ಸೃಷ್ಟಿಗೆ ಅಗತ್ಯ ಕ್ರಮದ ಮೂಲಕ ನಿರುದ್ಯೋಗ ತಡೆಯಬೇಕು
– ಬೋನಸ್‌, ಪಿಎಫ್ ಪಡೆಯಲು ಇರುವ ವೇತನ ಮಿತಿ ತೆಗೆಯಬೇಕು, ಗ್ರಾಚ್ಯುಯಿಟಿ ಪ್ರಮಾಣ ಹೆಚ್ಚಿಸಬೇಕು
– ರೈಲ್ವೆ, ವಿಮಾ ಮತ್ತು ರಕ್ಷಣಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಬಾರದು
– ಅರ್ಜಿ ಸಲ್ಲಿಸಿದ 45 ದಿನಗಳ ಒಳಗೆ ಕಾರ್ಮಿಕ ಸಂಘಟನೆಗಳ ನೋಂದಣಿ ಮಾಡಬೇಕು
– ಸರ್ಕಾರಿ ಕೆಲಸಗಳನ್ನು ಹೊರುಗುತ್ತಿಗೆ ನೀಡಬಾರದು, ಗುತ್ತಿಗೆ ನೌಕರರಿಗೂ, ಕಾಯಂ ನೌಕರರ ವೇತನ ಮತ್ತು ಇತರೆ ಸೌಲಭ್ಯ ನೀಡಬೇಕು

 

Write A Comment