ಪಾಟ್ನಾ, ಆ.28: ಈ ವರ್ಷ ನವೆಂಬರ್ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದಲ್ಲೀಗ ಕೋಟಿಗಳ ಯುದ್ಧ ಆರಂಭವಾಗಿದೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯ ಸರಕಾರವು ರೂ. 2.70 ಲಕ್ಷ ಕೋಟಿಗಳ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಿದೆಯೆಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮೊನ್ನೆಯಷ್ಟೇ ಬಿಹಾರಕ್ಕೆ ರೂ. 1.25 ಲಕ್ಷ ಕೋಟಿ ಕೇಂದ್ರೀಯ ಸಹಾಯದ ಭರವಸೆ ನೀಡಿದ್ದರು. ನಿತೀಶ್ ಘೋಷಿಸಿರುವ ಮೊತ್ತವು ಅದಕ್ಕಿಂತಲೂ ಹೆಚ್ಚಾಗಿದೆ.
ಇದು ಪ್ರಧಾನಿ ಘೋಷಿಸಿರುವಂತಹ ಪ್ಯಾಕೇಜ್ ಅಲ್ಲ. ತಾವು ಈ ಯೋಜನೆಗಳಿಗಾಗಿ ನಿಧಿಯನ್ನು ಪಡೆದು ಸಾಧ್ಯವಾದಷ್ಟು ಬೇಗ ಅವುಗಳನ್ನು ಅನುಷ್ಠಾನಗೊಳಿಸುತ್ತೇವೆಂದು ನಿತೀಶ್ ಪತ್ರಿಕಾ ಗೋಷ್ಠಿಯೊಂದರಲ್ಲಿ ಹೇಳಿದರು.
ರಾಷ್ಟ್ರೀಯ