ಉಡುಪಿ: ಲೈಬ್ರೇರಿಗೆ ತೆರಳಿದ ವ್ಯಕ್ತಿಯೋರ್ವರು ನಿಗೂಢವಾಗಿ ನಾಪತ್ತೆಯಾದ ಘಟನೆ ಮಣಿಪಾಲದಲ್ಲಿ ನಡೆದಿದೆ.
್ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದಲ್ಲಿ ಉದ್ಯೋಗಿಯಾಗಿದ್ದ ಡಾ| ರಾಜರಾಜನ್ ಮುರುಗಯ್ಯನ್ ಅವರೇ ಕಾಣೆಯಾದವರಾಗಿದ್ದಾರೆ.
ಆ. 24ರ ರಾತ್ರಿ 10.30ಕ್ಕೆ ಮಣಿಪಾಲ ವಿವಿ ಲೈಬ್ರೆರಿಗೆ ಹೋಗಿದ್ದವರು ಬಳಿಕ ವಾಪಾಸಾಗದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
