ರಾಷ್ಟ್ರೀಯ

ನಾನು ‘ವಿಐಪಿ’ ಅಲ್ಲ ಎಂದ ರಾಬರ್ಟ್ ವಾದ್ರಾ !

Pinterest LinkedIn Tumblr

vadraಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕೃಪಾ ಕಟಾಕ್ಷದಿಂದ ‘ರಾಜಗೌರವ’ ಪಡೆಯುತ್ತಿದ್ದ ರಾಬರ್ಟ್ ವಾದ್ರಾ ತಾವೇನೂ ವಿಐಪಿ ಅಲ್ಲ ಎನ್ನುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.

ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆಯಿಂದ ತಮಗೆ ಸಿಗುತ್ತಿದ್ದ ವಿಶೇಷ ವಿನಾಯ್ತಿ ರದ್ದು ಮಾಡಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮದ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ತಾವು ಈ ಕ್ರಮವನ್ನು ಸ್ವಾಗತಿಸುತ್ತಿದ್ದು ನಾನೇನೂ ವಿಐಪಿಯಲ್ಲ. ಹಾಗಾಗಿ ಸರ್ಕಾರ ಸಮರ್ಪಕ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.

ನಾನೀಗ ವಿಐಪಿ ಅಲ್ಲ. ನನ್ನನ್ನು ಆ ರೀತಿ ಪರಿಗಣಿಸಲೂ ಬೇಡಿ ಎಂದಿರುವ ವಾದ್ರಾ ಈ ವಿಶೇಷ ವಿನಾಯ್ತಿ ರದ್ದಾಗಿರುವುದಕ್ಕೆ ಖುಷಿಯಾಗಿದ್ದು  ಭದ್ರತಾ ತಪಾಸಣೆ ವಿನಾಯ್ತಿಯನ್ನು ನಾನು ಯಾವತ್ತೂ ಬಳಸಿಲ್ಲ. ಇದು ರದ್ದಾಗಲಿ ಎಂದು ಕಾಯುತ್ತಿದ್ದೆ. ಅಲ್ಲದೇ ಈ ವಿಚಾರಕ್ಕೆ ಸಂಬಂಧಿಸಿ ನಾನು ಈ ಹಿಂದೆಯೂ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ ಎಂದು ವಿವರಿಸಿದ್ದಾರೆ.

ಇತ್ತೀಚೆಗಷ್ಟೇ ವಾದ್ರಾ ಅವರಿಗೆ ವಿಮಾನ ನಿಲ್ದಾಣಗಳಲ್ಲಿ ನೀಡಲಾಗುತ್ತಿದ್ದ  ಭದ್ರತಾ ತಪಾಸಣೆಯವಿನಾಯತಿಯನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮಾತನಾಡಿರುವ  ವಾದ್ರಾ ಇದರಲ್ಲಿ ತಪ್ಪಿಲ್ಲ ಎನ್ನುವ ಮೂಲಕ ಕೇಂದ್ರದ ಕ್ರಮವನ್ನು ಸ್ವಾಗತಿಸಿದ್ದಾರೆ.

Write A Comment