ಕನ್ನಡ ವಾರ್ತೆಗಳು

ಚಿಟ್ಟೆಗಳ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಉಚಿತ ಜನಜಾಗೃತಿ ಶಿಬಿರ.

Pinterest LinkedIn Tumblr

butter_fly_photo_11

ಮಂಗಳೂರು,ಆಗಸ್ಟ್.14: ಸಮ್ಮಿಲನ್ ಶೆಟ್ಟಿ ಬಟರ್ ಫ಼್ಲೈ ಪಾರ್ಕ್ 2013 ರಲ್ಲಿ ಶ್ರೀ.ಐಸಾಕ್ ಕೆಮಿಕರ್ (ಉಪ ನಿರ್ದೇಶಕರು,ಬಿ.ಎನ್.ಎಚ್.ಎಸ್, ಮುಂಬಯಿ) ಅವರಿಂದ ಲೋಕಾರ್ಪಣೆಗೊಂಡು ಇದೀಗ ಸಾರ್ಥಕ 2 ವರ್ಷಗಳನ್ನು ಪೋರೈಸಿದ ಈ ಸಂದರ್ಭದಲ್ಲಿ, ಆಗಸ್ಟ್ 15 ಮತ್ತು 16 ರಂದು 2 ದಿನಗಳ ಚಿಟ್ಟೆಗಳ ಸಂರಕ್ಷಣೆ ಕುರಿತು ಮಾಹಿತಿ ಶಿಬಿರ ಸಾರ್ವಜನಿಕರಿಗಾಗಿ ಉಚಿತವಾಗಿ ನಡೆಯಲಿದೆ.

ಈ ಪಾರ್ಕ್ ಅಧಿಕೃತವಾಗಿ ಉದ್ಘಾಟಿಸಲ್ಪಟ್ಟ ನಂತರ 2 ವರ್ಷದಲ್ಲಿ 14 ಪ್ರಭೇದದ ಚಿಟ್ಟೆಗಳು ಪಾರ್ಕಿನಲ್ಲಿ ಪತ್ತೆಯಾಗಿದ್ದು ಒಟ್ಟು 131 ಪ್ರಭೇದಗಳನ್ನು ಈವರೆಗೆ ಪಾರ್ಕಿನಲ್ಲಿ ಗುರುತಿಸಲಾಗಿದೆ. (ಪಶ್ಚಿಮ ಘಟ್ಟದಲ್ಲಿ ಒಟ್ಟು 339 ಚಿಟ್ಟೆ ಪ್ರಭೇದಗಳಿವೆ) ಅದರಲ್ಲೂ ಪಶ್ಚಿಮ ಘಟ್ಟದಲ್ಲಿ ಅಪರೂಪವಾಗಿ ಕಾಣಸಿಗುವ ಪ್ರಭೇದಗಳಾದ ಎಬೆರೆಂಟ್ ಓಕ್ ಬ್ಲೂ ಮತ್ತು ಆರ್ಕಿಡ್ ಟಿಟ್ ಚಿಟ್ಟೆಗಳು ಈ ವರ್ಷ ಪತ್ತೆಯಾಗಿವೆ.

shetty_Butfly_workshop_1 shetty_Butfly_workshop_2 shetty_Butfly_workshop_3 shetty_Butfly_workshop_4 shetty_Butfly_workshop_5 shetty_Butfly_workshop_8 shetty_Butfly_workshop_10 shetty_Butfly_workshop_11 shetty_Butfly_workshop_12 shetty_Butfly_workshop_13 shetty_Butfly_workshop_14 shetty_Butfly_workshop_15 shetty_Butfly_workshop_16 shetty_Butfly_workshop_17 shetty_Butfly_workshop_18 shetty_Butfly_workshop_19 shetty_Butfly_workshop_20 shetty_Butfly_workshop_21 shetty_Butfly_workshop_22 shetty_Butfly_workshop_24 shetty_Butfly_workshop_7 shetty_Butfly_workshop_6  shetty_Butfly_workshop_23

ಪಶ್ಚಿಮ ಘಟ್ಟದ ಚಿಟ್ಟೆಗಳಿಗೆ ವಾಸ ಸ್ಥಳವಾಗಿ ಅವುಗಳ ಸಂತತಿ ಪ್ರಾಕೃತಿಕವಾಗಿ ಬೆಳೆಸುವಲ್ಲಿ ಪಾರ್ಕ್ ಯಶಸ್ವಿಯಾಗಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಅದೇ ದಿನ ಬೆಳಗ್ಗೆ 8.30 ರಿಂದ 9.00 ಒಳಗೆ ಪಾರ್ಕಿನಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಬೇಕು.

ಕಾರ್ಯಕ್ರಮದ ವಿವರ: ಸಮ್ಮಿಲನ್ ಶೆಟ್ಟಿ ಅವರಿಂದ ಚಿಟ್ಟೆಗಳ ಕುರಿತಾದ ಮಾಹಿತಿ, ಪಾರ್ಕಿನಲ್ಲೇ ಚಿತ್ರೀಕರಿಸಿದ ಚಿಟ್ಟೆಗಳ ಜೀವನಶೈಲಿಯ ವೀಡಿಯೋ ಪ್ರಾತ್ಯಕ್ಷಿತೆ, ಮತ್ತು ಪಾರ್ಕಿನಲ್ಲಿ ಚಿಟ್ಟೆಗಳ ಗುರುತಿಸುವಿಕೆ ಮತ್ತು ಅವುಗಳ ಫೊಟೊಗ್ರಫಿ ಕುರಿತು ಮಾಹಿತಿ 11 ಗಂಟೆಯ ತನಕ ನಡೆಯಲಿದೆ.
ಸಂಪರ್ಕಕ್ಕಾಗಿ:+91 9845993292

Write A Comment