ರಾಷ್ಟ್ರೀಯ

ವಿವಾದಾತ್ಮಕ ರಾಮ್‌ಲಲ್ಲಾ ದೇವಸ್ಥಾನದ ದುರಸ್ತಿಗೆ ಸುಪ್ರೀಂ ಅವಕಾಶ

Pinterest LinkedIn Tumblr

ramನವದೆಹಲಿ, ಆ.10- ಉತ್ತರಪ್ರದೇಶದ ಅಯೋಧ್ಯಾದಲ್ಲಿರುವ ವಿವಾದಾತ್ಮಕ ರಾಮ್‌ಲಲ್ಲಾ ದೇವಸ್ಥಾನದ ದುರಸ್ತಿ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲು ಸುಪ್ರೀಂಕೋರ್ಟ್ ಇಂದು ಷರತ್ತು ಬದ್ಧ ಅವಕಾಶವನ್ನು ನೀಡಿದೆ.ಫೈಸಲ್ ಬಾದ್‌ನ ಜಿಲ್ಲಾಧಿಕಾರಿ ಉಸ್ತುವಾರಿಯಲ್ಲಿ ರಾಮ್‌ಲಲ್ಲಾ ದೇವಸ್ಥಾನವನ್ನು ಸ್ಥಳಾಂತರಿಸಿ ರಿಪೇರಿ ಹಾಗೂ ಭಕ್ತಾದಿಗಳಿಗೆ ಸೌಲಭ್ಯ ಕಲ್ಪಿಸಲು ಸುಪ್ರೀಂಕೋರ್ಟ್ ಅವಕಾಶ ಒದಗಿಸಿದೆ.
ಕಳೆದ ಶುಕ್ರವಾರ ಸುಪ್ರೀಂಕೋರ್ಟ್ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ರಾಮ್‌ಲಲ್ಲಾ ದೇವಸ್ಥಾನದಲ್ಲಿ ರಿಪೇರಿ ಕಾರ್ಯ ಮತ್ತು ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಎರಡೂ ಸರ್ಕಾರಗಳು ಅಭಿಪ್ರಾಯ ನೀಡಬೇಕೆಂದು ಸೂಚನೆ ಕೊಟ್ಟಿತ್ತು.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಇಲ್ಲಿ ಸೌಲಭ್ಯಗಳನ್ನು ಕಲ್ಪಿಸುವ ಅಗತ್ಯವಿದೆ ಎಂದು ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅನಿಲ್ ಆರ್.ದವೇ ಕುರಿಯನ್ ಜೋಸೆಫ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಭಕ್ತಾದಿಗಳಿಗೆ ಪ್ರಾರ್ಥನೆ ಸಲ್ಲಿಸಬೇಕಾದರೆ ಸೌಲಭ್ಯಗಳನ್ನು ನೀಡಬೇಕಾದ ಅಗತ್ಯವಿದೆ. ಇದಕ್ಕೆ ಷರತ್ತು ಬದ್ಧ ಅವಕಾಶ ನೀಡಲಾಗುವುದು ಎಂದು ಹೇಳಿದರು.ಆದರೆ ಇದಕ್ಕೆ ಉತ್ತರ ಪ್ರದೇಶದ ಅಡ್ವೊಕೇಟ್ ಜನರಲ್ ವಿ.ಬಿ.ಸಿಂಗ್ ಆಕ್ಷೇಪಿಸಿ ಯಾವ ಭಕ್ತಾದಿಗಳು ನಮಗೆ ಸೌಲಭ್ಯ ಬೇಕು ಎಂದು ಕೇಳುತ್ತಿಲ್ಲ. ಆದರೆ ಅರ್ಜಿದಾರರಾದ ಸುಬ್ರಹ್ಮಣಿಯನ್ ಸ್ವಾಮಿ ಮಾತ್ರ ಕೇಳುತ್ತಿದ್ದಾರೆ.

ಅವರ ವಾದವನ್ನು ಮನ್ನಿಸಬಾರದೆಂದು ಮನವಿ ಮಾಡಿದರು.ಸುಬ್ರಹ್ಮಣಿಯನ್ ಸ್ವಾಮಿ ವಾದ ಮಂಡಿಸಿ ಅಯೋಧ್ಯೆಯ ರಾಮಲಲ್ಲಾ ದೇವಸ್ಥಾನದಲ್ಲಿ ಭಕ್ತರಿಗೆ ಕನಿಷ್ಟ ಸೌಲಭ್ಯಗಳಿಲ್ಲ. ಕುಡಿಯುವ ನೀರು, ಶೌಚಾಲಯ, ಸ್ನಾನ ಗೃಹ ಸೇರಿದಂತೆ ಯಾವುದೂ ಕೂಡ ಇಲ್ಲ. ಪ್ರತಿ ದಿನ ಇಲ್ಲಿ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.ಸುಮಾರು 4 ಕಿ.ಮೀ ದೂರದಲ್ಲಿ ನೀರು, ಶೌಚಾಲಯಗಳು ಇರುವುದರಿಂದ ಭಕ್ತರಿಗೆ ತೊಂದರೆಯಾಗುತ್ತದೆ. 1996, ಫೆ.23 ಅಲಹಾಬಾದ್‌ನ ಹೈಕೋರ್ಟ್ ರಾಮ್‌ಲಲ್ಲಾ ಮಂದಿರದಲ್ಲಿ ಭಕ್ತರಿಗೆ ಕನಿಷ್ಟ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು ಎಂಬುದನ್ನು ಮನವರಿಕೆ ಮಾಡಿಕೊಟ್ಟರು.ಇದನ್ನು ಮನ್ನಿಸಿದವ ನ್ಯಾಯಮೂರ್ತಿಗಳು ಷರತ್ತು ಬದ್ಧ ಷರತ್ತುಗಳನ್ನು ವಿಧಿಸಿ ಫೈಸಲ್‌ಬಾದ್‌ನ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ದುರಸ್ತಿ ಹಾಗೂ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಅವಕಾಶ ನೀಡಿದರು.

Write A Comment