ಮುಂಬೈ, ಆ.2-ಚಿನ್ನದ ವ್ಯಾಮೋಹ ಮಿತಿಮೀರುತ್ತಿದೆ. ಕಳೆದ ಏಪ್ರಿಲ್-ಮೇನಲ್ಲೇ 155 ಟನ್ ಹಳದಿ ಲೋಹವನ್ನು ತಂದರೂ ಬೇಡಿಕೆ ಈಡೇರಿಸಲು ಮಾತ್ರ ಸಾಧ್ಯವಾಗಿಲ್ಲವಂತೆ. ಚೀನಿವಾರಪೇಟೆಯಲ್ಲಿ ಅಧಿಕ ಆಷಾಢ ಮಾಸದಲ್ಲೂ ಚಿನ್ನದ ಬೆಲೆ ಕಡಿಮೆಯಾದ ಪರಿಣಾಮ ಒಮ್ಮೆಲೆ ಗ್ರಾಹಕರು ಚಿನ್ನಾಭರಣ ಮಳಿಗೆಗಳಿಗೆ ಮುಗಿಬಿದ್ದಿದ್ದು, ವಿದೇಶದಿಂದ 155ಟನ್‌ಗೂ ಹೆಚ್ಚು ಆಮದು ಮಾಡಿಕೊಳ್ಳಲಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ
ಇದು ಶೇ.61ರಷ್ಟು ಏರಿಕೆ ಪ್ರಮಾಣ ದಾಖಲಾಗಿದೆ. ಆಗಸ್ಟ್-ಮೇನಲ್ಲೂ ಚಿನ್ನದ ಮಾರಾಟ ಮುಂದುವರೆಯಲಿದೆ ಎಂದು ವಿಶ್ವಾಸ ವ್ಯಕ್ತವಾಗಿದೆ.