ಮಂಗಳೂರು, ಜುಲೈ.31 : ಅಂಬೇಡ್ಕರ್ ಯೋಜನೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಹೊಸದಿಲ್ಲಿ ಇವರ ಷರತ್ತುಗಳನ್ವಯ ಅಂತರ್ಜಾತಿ ವಿವಾಹ ಕಾರ್ಯಕ್ರಮದಡಿ ಅಂತರ್ಜಾತಿ ವಿವಾಹವಾದ ದಂಪತಿಗೆ ಪ್ರೋತ್ಸಾಹ ಧನ ಮಂಜೂರಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಈ ಸಂಬಂಧಒಟ್ಟು 26 ಫಲಾನುಭವಿಗಳ ಆಯ್ಕೆಗೆ ಅವಕಾಶವಿದೆ. ಪ್ರೋತ್ಸಾಹ ಧನ 2.50 ಲಕ್ಷ ರೂ. ಆಗಿದ್ದು, ಅಂತರ್ಜಾತಿ ವಿವಾಹವಾದ ದಂಪತಿ ನೋಂದಣಿ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ದಂಪತಿಯ ವಾರ್ಷಿಕ ಆದಾಯ 5 ಲಕ್ಷ ರೂ.ಮೀರಿರಬಾರದು. ದಂಪತಿ ಪೈಕಿ ಒಬ್ಬರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿ, ಮಂಗಳೂರು ದೂರವಾಣಿ ಸಂಖ್ಯೆ 0824-2441269ನ್ನು ಸಂಪರ್ಕಿಸಬಹುದು.
