ರಾಷ್ಟ್ರೀಯ

ಮತ್ತೆ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ ಯಾಕೂಬ್‌

Pinterest LinkedIn Tumblr

yakooboob

ಹೊಸದಿಲ್ಲಿ: ಗಲ್ಲು ಶಿಕ್ಷೆಗೆ ಒಂದು ದಿನ ಬಾಕಿ ಇರುವಂತೆ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿಗೆ ಮುಂಬಯಿ ಸರಣಿ ಸ್ಫೋಟ ಪ್ರಕರಣದ ದೋಷಿ ಯಾಕೂಬ್‌ ಮೆಮೊನ್‌ ಮತ್ತೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ.

ಗಲ್ಲು ಶಿಕ್ಷೆಗೆ ತಡೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ವಿಚಾರಣೆ ನಡೆಸುತ್ತಿರುವ ನಡುವೆಯೇ, ಯಾಕೂಬ್‌ ಪರ ವಕೀಲರು ಕ್ಷಮಾದಾನ ಕೋರಿ ಮತ್ತೆ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದಾರೆ. ಯಾಕೂಬ್‌ಗೆ ಗುರುವಾರ ಬೆಳಗ್ಗೆ ಗಲ್ಲು ಶಿಕ್ಷೆ ನಿಗದಿಯಾಗಿದೆ.

ಗಲ್ಲಿಗೆ ತಡೆ ಕೋರಿ ಯಾಕೂಬ್‌ ಮೆಮೊನ್‌ ಸಲ್ಲಿಸಿರುವ ಅರ್ಜಿ ಸಂಬಂಧ ನ್ಯಾಯಮೂರ್ತಿಗಳಾದ ಎ.ಆರ್.ದವೆ ಹಾಗೂ ಕುರಿಯನ್‌ ಜೋಸೆಫ್‌ ಅವರಿದ್ದ ಪೀಠ ಮಂಗಳವಾರ ಭಿನ್ನ ನಿಲುವು ತಾಳಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸುವ ನಿರ್ಧಾರವನ್ನು ಮುಖ್ಯನ್ಯಾಯಮುರ್ತಿ ಎಚ್‌.ದತ್ತು ಅವರಿಗೆ ಬಿಟ್ಟಿತ್ತು.

ಯಾಕೂಬ್‌ ಅರ್ಜಿ ವಿಚಾರಣೆಗೆ ಯೋಗ್ಯ ಅಲ್ಲ ಎಂದು ನ್ಯಾ.ದವೆ ಅಭಿಪ್ರಾಯಪಟ್ಟರೆ, ಕ್ಯೂರೇಟಿವ್‌ ಅರ್ಜಿಯ ಮರುಪರಿಶೀಲನೆ ಅಗತ್ಯ ಇದೆ ಎಂದು ನ್ಯಾ.ಕುರಿಯನ್‌ ಅಭಿಪ್ರಾಯಪಟ್ಟಿದ್ದರು. ನಂತರ ಯಾಕೂಬ್‌ ಅರ್ಜಿ ವಿಚಾರಣೆಗೆ ನ್ಯಾಯಮೂರ್ತಿಗಳಾದ ದೀಪಿಕ್‌ ಮಿಶ್ರಾ, ಪ್ರಫುಲ್ಲಾ ಸಿ. ಪಂತ ಹಾಗೂ ಅಮಿತ್ವ ರಾಯ್‌ ಅವರನ್ನೊಳಗೊಂಡ ತ್ರಿಸದಸ್ಯ ಪೀಠವನ್ನು ಮುಖ್ಯ ನ್ಯಾಯಮೂರ್ತಿ ರಚಿಸಿದ್ದು, ಪೀಠ ಯಾಕೂಬ್‌ ಹಣೆಬರವನ್ನು ನಿರ್ಧರಿಸಲಿದೆ.

Write A Comment