ಉಡುಪಿ: ನಮಾಜಿಗೆ ತೆರಳಿದ ಯುವಕನೋರ್ವ ನಿಗೂಢವಾಗಿ ನಾಪತ್ತೆಯಾದ ಘಟನೆ ಉಡುಪಿ ಬಡಗುಬೆಟ್ಟು ಎಂಬಲ್ಲಿ ಶುಕ್ರವಾರ ನಡೆದಿದೆ.
ಉಡುಪಿಯ ಬಡಗುಬೆಟ್ಟು ಗ್ರಾಮದ ಶಾಂತನಂದ ರೆಸಿಡೆನ್ಸಿ 2ನೇ ಮಹಡಿ ಮಿಷನ್ ಕಂಪೌಂಡ್ ನಿವಾಸಿ ಶೋಹೆಬ್ (18) ಎಂಬಾತನೇ ಕಾಣೆಯಾದ ಯುವಕ.
ಶುಕ್ರವಾರ ಮಧ್ಯಾಹ್ನ 12:30 ಗಂಟೆಗೆ ಉಡುಪಿಯ ಮಸೀದಿಗೆ ನಮಾಜ್ ಗೆ ಹೋಗಿದ್ದು ವಾಪಾಸು ಮನೆಗೆ ಬಾರದ ಕಾರಣ ಈತನ ಸ್ನೇಹಿತರಲ್ಲಿ ವಿಚಾರಿಸಿದರೂ ಈತನ ಪತ್ತೆಯಾಗಿರುವುದಿಲ್ಲ.
ಈ ಬಗ್ಗೆ ಉಡುಪಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
