ಮೈಸೂರು, ಜು.20-ರಂಜಾನ್ ಹಾಗೂ ವಾರದ ಕೊನೆಯ 3 ದಿನಗಳ ರಜೆಯ ಹಿನ್ನೆಲೆಯಲ್ಲಿ ನಗರಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಭಾನುವಾರ ಒಂದೇ ದಿನ 23 ಸಾವಿರ ಮಂದಿ ಪ್ರವಾಸಿಗರು ಅರಮನೆಗೆ ಬೇಟಿ ನೀಡಿದ್ದಾರೆ ಇದರಿಂದ 9.60 ಲಕ್ಷ ರೂ. ಸಂಗ್ರಹವಾಗಿದೆ.
ನಗರದಲ್ಲಿರುವ ಶ್ರೀಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ, ಜಗನ್ಮೋಹನ ಅರಮನೆ ಹಾಗೂ ಸಂತ ಫಿಲೋಮಿನ ಚರ್ಚ್‌ಗೆ ಸಾವಿರಾರು ಮಂದಿ ಭೇಟಿ ನೀಡಿ ವೀಕ್ಷಿಸಿದರು. ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ ಹಿನ್ನೆಲೆಯಲ್ಲಿ ಅರಮನೆಯ ಆಸು-ಪಾಸಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅದೇ ರೀತಿ ಮೈಸೂರು ಬೆಂಗಳೂರು ರಸ್ತೆಯಲ್ಲಿಯೂ ಸಹ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.