ನವದೆಹಲಿ: ಭಾರತ-ಪಾಕಿಸ್ತಾನ ದೇಶಗಳು ರಾಜಕೀಯವಾಗಿ ಒಪ್ಪಂದಕ್ಕೆ ಬಂದರೆ ಕದನ ವಿರಾಮ ಉಲ್ಲಂಘನೆ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಪಾಕಿಸ್ತಾನ ರಾಯಭಾರಿ ಶನಿವಾರ ಹೇಳಿದೆ.
ರಂಜಾನ್ ಹಬ್ಬದ ಪ್ರಯುಕ್ತ ಇಂದು ನವದೆಹಲಿ ಮಸೀದಿಗೆ ಭೇಟಿ ನೀಡಿ ನಂತರ ಮಾತನಾಡಿರುವ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಾಸಿತ್ ಅವರು, ಎರಡು ದೇಶಗಳ ಮಧ್ಯೆ ಇರುವ ಸಮಸ್ಯೆಗಳು ಸಾಧ್ಯವಾದಷ್ಟು ಬೇಗ ಇತ್ಯರ್ಥಗೊಳ್ಳತ್ತದೆ ಎಂಬು ನಂಬಿದ್ದೇವೆ. ಭಾರತ-ಪಾಕಿಸ್ತಾನ ದೇಶಗಳು ಒಮ್ಮತಕ್ಕೆ ಬರಬೇಕಿದ್ದು, ಎರಡು ದೇಶಗಳ ಮಧ್ಯೆ ಒಪ್ಪಂದವಾದರೆ ದೇಶದಲ್ಲಿರುವ ಬಡತನ, ಅನಕ್ಷರತೆ ಹಾಗೂ ಇನ್ನಿತರೆ ಸಮಸ್ಯೆಗಳೂ ಸಹ ಬಗೆಹರಿಯುತ್ತದೆ ಎಂದು ಹೇಳಿದ್ದಾರೆ.
ಈ ಹಿಂದೆ ನಾವು ಶಾಂತಿಯುತವಾಗಿಯೇ ಇದ್ದು ದೇಶವನ್ನು ಕಾಯುತ್ತಿದ್ದೇವೆ. ಆದರೆ, ನಮ್ಮ ಶಾಂತಿಯನ್ನು ಹಾಳು ಮಾಡಲು ಅಪ್ರಚೋದಿತ ದಾಳಿ ನಡೆಸಿದರೆ ಅದನ್ನು ನಾವು ಎಂದಿಗೂ ಸಹಿಸುವುದಿಲ್ಲ. ಪಾಕಿಸ್ತಾರ ಅಪ್ರಚೋದಿತ ದಾಳಿಗೆ ಭಾರತ ದಿಟ್ಟ ಉತ್ತರ ನೀಡುತ್ತದೆ ಎಂದು ಭಾರತೀಯ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದರು.
ಜಮ್ಮು-ಕಾಶ್ಮೀರದಲ್ಲಿ ಪಾಕ್ ಸೈನಿಕರು ಪದೇಪದೇ ಕದನ ವಿರಾಮ ಉಲ್ಲಂಘಿಸುತ್ತಿರುವುದನ್ನು ವಿರೋಧಿಸಿ ಜು.16 ರಂದು ನವದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು.