ಪ್ಯಾರಿಸ್ (ಎಎಫ್‌ಪಿ): ಅಪರಿಚಿತ ಬಂದೂಕುದಾರಿಗಳು ವಾಣಿಜ್ಯ ಮಳಿಗೆಯೊಂದಕ್ಕೆ ನುಗ್ಗಿ ಹತ್ತು ಜನರನ್ನು ಒತ್ತೆ ಇರಿಸಿಕೊಂಡಿರುವ ಘಟನೆ ಪ್ಯಾರಿಸ್‌ನಲ್ಲಿ ನಡೆದಿದೆ.
ಪ್ಯಾರಿಸ್ ಹೊರವಲಯದಲ್ಲಿರುವ ಪ್ರಿಮಾರ್ಕ್ ವಾಣಿಜ್ಯ ಮಳಿಗೆಗೆ ನುಗ್ಗಿದ ಮೂವರು ಅಪರಿಚಿತ ಬಂದೂಕುದಾರಿಗಳು ಗ್ರಾಹಕರು ಸೇರಿದಂತೆ ಹತ್ತು ಜನ ನೌಕರರನ್ನು ಒತ್ತೆ ಇರಿಸಿಕೊಂಡಿದ್ದಾರೆ ಎಂದು ಪ್ಯಾರಿಸ್ ಪೊಲೀಸರು ತಿಳಿಸಿದ್ದಾರೆ.
ಆ ಮಳಿಗೆಯನ್ನು ಪೊಲೀಸರು ಸುತ್ತುವರೆದಿದ್ದು ಜನರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೂ ಪ್ರಾಣ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಮಳಿಗೆಯೊಳಗೆ ಏನು ನಡೆಯುತ್ತಿದೆ ಎಂಬುದು ಸಹ ತಿಳಿಯುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಂದೂಕುದಾರಿಗಳು ದರೋಡೆಕೋರರಿಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.
