ರಾಷ್ಟ್ರೀಯ

ಯುವಕನನ್ನು ವಿಕೃತ ಕಾಮಕ್ಕೆ ಬಳಸಿಕೊಂಡ ವೃದ್ದರು !

Pinterest LinkedIn Tumblr

raಅಕೋಲಾ: 80 ಹಾಗೂ 70 ವರ್ಷದ ವೃದ್ದರಿಬ್ಬರು 22 ವರ್ಷದ ಯುವಕನೊಬ್ಬನಿಗೆ ಕೆಲಸದ ಆಮಿಷವೊಡ್ಡಿ ವಿಕೃತ ಕಾಮಕ್ಕೆ ಬಳಸಿಕೊಂಡಿದ್ದು, ಕೊಟ್ಟ ಭರವಸೆಯನ್ನು ಈಡೇರಿಸದ ಕಾರಣ ರೊಚ್ಚಿಗೆದ್ದ ಯುವಕ ಇವರ ಕಾಮ ಕೃತ್ಯದ ವಿಡಿಯೋಗಳನ್ನು ಮಾಧ್ಯಮದ ಮುಂದೆ ಬಹಿರಂಗಪಡಿಸಿದ್ದಾನೆ.

ಮಹಾರಾಷ್ಟ್ರದ ಅಕೋಲಾದಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಣ ಸಂಸ್ಥೆಯೊಂದರಲ್ಲಿ ಹಂಗಾಮಿ ನೌಕರನಾಗಿದ್ದ ಈ ಯುವಕನಿಗೆ ಕೆಲಸವನ್ನು ಪರ್ಮನೆಂಟ್ ಮಾಡಿಸುವುದಾಗಿ ಆಮಿಷವೊಡ್ಡಿದ 80 ವರ್ಷದ ನಿರಂಜನ್ ಕುಮಾರ್ ಗೊಯೆಂಕಾ ಹಾಗೂ 70 ವರ್ಷದ ಜುಗಲ್ ಕಿಶೋರ್ ರುಂಗ್ಟಾ ಹಲವು ವರ್ಷಗಳಿಂದಲೂ ತಮ್ಮ ವಿಕೃತ ಕಾಮನೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದರೆಂದು ಹೇಳಲಾಗಿದೆ.

ನಿರಂಜನ್ ಕುಮಾರ್ ಗೊಯೆಂಕಾ ಹಾಗೂ ಜುಗಲ್ ಕಿಶೋರ್ ರುಂಗ್ಟಾ ಈ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳೆನ್ನಲಾಗಿದ್ದು, ಬರೀ ಭರವಸೆಯಲ್ಲೇ ಕಾಲ ಕಳೆಯುತ್ತಿದ್ದರಿಂದ ಬೇಸತ್ತಿದ್ದ ಯುವಕ ಇವರುಗಳ ಕೃತ್ಯಗಳನ್ನೆಲ್ಲಾ ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಟ್ಟುಕೊಂಡಿದ್ದನೆನ್ನಲಾಗಿದೆ. ಮೂರು ದಿನಗಳ ಹಿಂದೆ ಮಾಧ್ಯಮಗಳ ಮುಂದೆ ಈ ವಿಡಿಯೋ ಬಹಿರಂಗಪಡಿಸಿರುವುದಲ್ಲದೇ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಿಸಿದ್ದಾನೆ.

ಅನೈಸರ್ಗಿಕ ಲೈಂಗಿಕ ಕ್ರಿಯೆ ಸೇರಿದಂತೆ ವಿವಿಧ ಪ್ರಕರಣಗಳಡಿ ವೃದ್ದರಿಬ್ಬರ ಮೇಲೆ ಪ್ರಕರಣ ದಾಖಲಾಗಿದ್ದು, ಬಂಧನ ಭೀತಿಯೆದುರಿಸುತ್ತಿರುವ ಅವರುಗಳು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಯುವಕ ಬಹಿರಂಗಪಡಿಸಿರುವ ವಿಡಿಯೋವನ್ನು ಫೋರೆನ್ಸಿಕ್ ಲ್ಯಾಬ್ ಗೆ ಪರೀಕ್ಷೆಗಾಗಿ ಕಳಿಸಿರುವ ಪೊಲೀಸರು ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Write A Comment