ಕೆನಡಾದ ದಕ್ಷಿಣ ಅಲ್ಬರ್ಟ್ ಪ್ರದೇಶದಲ್ಲಿ ಸಾವಿರಾರು ವರ್ಷಗಳ ಹಿಂದಿನ ಕೊಂಬುಳ್ಳ ಡೈನೋಸಾರ್ ಪಳಯುಳಿಕೆಗಳು ಪತ್ತೆಯಾಗಿದ್ದು ಅಚ್ಚರಿಗೆ ಕಾರಣವಾಗಿದೆ.
ರಾಯಲ್ ಒಂಟಾರಿಯೋ ಮ್ಯೂಸಿಯಂ ತಂಡ ಡೈನೋಸಾರ್ ಪಳಯುಳಿಕೆಗಳನ್ನು ಪತ್ತೆ ಮಾಡಿದ್ದು 20 ಅಡಿ ಉದ್ದವಿರುವ ಈ ಪಳೆಯುಳಿಕೆ ಬರೋಬ್ಬರಿ 1000 ಕೆಜಿ ತೂಕವಿದ್ದು, 70 ಮಿಲಿಯನ್ ವರ್ಷಗಳ ಹಿಂದೆ ಈ ಡೈನೋಸಾರ್ ಬದುಕಿತ್ತು ಎಂದು ಅಂದಾಜಿಸಲಾಗಿದೆ.
ಈ ಪಳೆಯುಳಿಕೆಯಿಂದ ಇನ್ನಷ್ಟು ಮಾಹಿತಿಗಳು ಹೊರ ಬರಲಿದ್ದು ಸದ್ಯಕ್ಕೆ ಟೋರಾಂಟೋದ ರಾಯಲ್ ಒಂಟಾರಿಯೋ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲದಿನಗಳ ಹಿಂದೆ ಚೀನಾದಲ್ಲಿ ಡೈನೋಸಾರ್ ಮೊಟ್ಟೆಗಳು ಲಭಿಸುವ ಮೂಲಕ ಅಚ್ಚರಿಗೆ ಕಾರಣವಾಗಿದ್ದ ಬೆನ್ನಲ್ಲಿಯೇ ಇದೀಗ ಕೆನಡಾದಲ್ಲಿ ಪಳಯುಳಿಕೆಗಳು ದೊರೆತಿರುವುದು ಕುತೂಹಲ ಮೂಡಿಸಿದೆ.