ಕರ್ನಾಟಕ

ಪ್ರತ್ಯೇಕ ಪ್ರಕರಣ; ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಎರಡು ಚಿರತೆ ಮರಿಗಳು

Pinterest LinkedIn Tumblr

Cheeta-Dead1

ತುಮಕೂರು/ಚಿಕ್ಕಮಗಳೂರು: ಜು.9: ಅನುಮಾನಾಸ್ಪದ ರೀತಿಯಲ್ಲಿ ದಾಬಸ್ ಪೇಟೆಯ ಹೊರವಲಯದಲ್ಲಿ ಹಾಗೂ ಚಿಕ್ಕಮಗಳೂರಿನ ಬಾಳೆಹೊನ್ನೂರು ರಸ್ತೆಯಲ್ಲಿ ಎರಡು ಚಿರತೆಗಳು ಸಾವನ್ನಪ್ಪಿವೆ. ಮೇಲ್ನೋಟಕ್ಕೆ ಇವು ವಾಹನಗಳು ಡಿಕ್ಕಿಯಿಂದ ಸಂಭವಿಸಿರುವ ಘಟನೆ ಎಂದು ಹೇಳಲಾಗುತ್ತಿದೆ.

ದಾಬಸ್‌ಪೇಟೆಯ ಬರಗೇನಹಳ್ಳಿಯ ಗ್ರಾಮದ ಬಳಿ ಇರುವ ಮಹದೇವಮ್ಮನವರ ಗುಡಿಯ ಹತ್ತಿರ ಚಿರತೆ ಮರಿಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ಎರಡು ತಿಂಗಳಲ್ಲಿ ಇದು ಚಿರತೆ ಮರಿಯ ಎರಡನೆ ಸಾವಾಗಿದ್ದು, ಈ ಹಿಂದೆ ಆಲದಳ್ಳಿ ಬೆಟ್ಟದಲ್ಲಿ ಚಿರತೆ ಮರಿಯೊಂದು ಮೃತಪಟ್ಟಿತ್ತು. ಗ್ರಾಮದ ಪಕ್ಕದಲ್ಲಿಯೇ ಕೋಳಿಫಾರಂ ಇದ್ದು, ಕೋಳಿಗಳಿಗೆ ಹಾಕುವ ಆಹಾರವನ್ನು ತಿಂದು ಚಿರತೆ ಮೃತಪಟ್ಟಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.

Cheeta-Dead2

ಚಿಕ್ಕಮಗಳೂರಿನ ಆಲ್ದೂರು ಬಾಳೆಹೊನ್ನೂರು ರಸ್ತೆಯ ಕಂಚಕಲ್‌ದುರ್ಗಾದ ಬಳಿ ನಾಲ್ಕು ವರ್ಷದ ಗಂಡು ಚಿರತೆ ಅನುಮಾನಾಸ್ಪದವಾಗಿ ಮೃತಪಟ್ಟಿದೆ. ವಲಯ ಅರಣ್ಯಾಧಿಕಾರಿ ಜಯಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮಹಜರ್ ಮಾಡಿದ್ದಾರೆ. ಚಿರತೆ ರಸ್ತೆ ದಾಟುವಾಗ ಅಪರಿಚಿತ ವಾಹನಕ್ಕೆ ಸಿಲುಕಿ ಮೃತಪಟ್ಟಿದೆ ಎಂದು ಶಂಕಿಸಲಾಗಿದೆ.

ಮರಣೋತ್ತರ ವರದಿ ಬಂದ ನಂತರ ಅಂತಿಮ ಸತ್ಯ ತಿಳಿಯಲಿದೆ ಎಂದರು. ಆದರೆ ಕೆಲ ಪರಿಸರವಾದಿಗಳು ಚಿರತೆ ಸಾವು ಡಿಕ್ಕಿ ಹೊಡೆದಿದ್ದಲ್ಲ. ಉದ್ದೇಶ ಪೂರ್ವಕವಾಗಿ ಸ್ಥಳೀಯರು ಚಿರತೆಗೆ ವಿಷವಿಟ್ಟು ಕೊಂದಿದ್ದಾರೆ. ಶವವನ್ನು ಅನುಮಾನ ಬರದಂತೆ ರಸ್ತೆಗೆ ಎಸೆದು ಹೋಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಈ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ವಲಯ ಅರಣ್ಯಾಧಿಕಾರಿ ಮಾಣಿಕ್‌ರವರಿಗೆ ಮನವಿ ಮಾಡಿಕೊಂಡರು. ಮೃತಪಟ್ಟು 2 ದಿನ ಕಳೆದಿದೆ ಎಂದು ಹೇಳಲಾಗುತ್ತಿದ್ದು, ಅದನ್ನು ಈಗ ಸುಡಲಾಗಿದೆ.

Write A Comment