ಕರ್ನಾಟಕ

ನಾಲ್ವರು ಮಕ್ಕಳಿದ್ದರೂ ಹೆತ್ತ ತಾಯಿಯನ್ನು ಕೊಟ್ಟಿಗೆಯಲ್ಲಿಟ್ಟ ದುಷ್ಟ ಮಕ್ಕಳು !

Pinterest LinkedIn Tumblr

bettamma

ಕುಣಿಗಲ್, ಜು.9: ಜನ್ಮ ಕೊಟ್ಟ ತಾಯಿಗೆ ಇಳಿ ವಯಸ್ಸಿನಲ್ಲಿ ಮಕ್ಕಳು ಅನ್ನ-ನೀರು ನೀಡದೆ ಕೊಟ್ಟಿಗೆಯಲ್ಲಿ ಕೂಡಿ ಹಾಕಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಶೆಟ್ಟಿಗೆಹಳ್ಳಿಯಲ್ಲಿ ನಡೆದಿದೆ. ಶೆಟ್ಟಿಗೆಹಳ್ಳಿ ಗ್ರಾಮದ ಬೆಟ್ಟಮ್ಮ (98)ತಾನು ಜನ್ಮ ನೀಡಿದ ಮಕ್ಕಳಿಂದಲೇ ನಿರ್ಲಕ್ಷ್ಯಕ್ಕೊಳಗಾದ ದನ-ಕರುಗಳಿಗಿಂತ ಹೀನಾಯವಾಗಿ ಕೊಟ್ಟಿಗೆಯಲ್ಲಿ ಮೂಕ ವೇದನೆ ಅನುಭವಿಸುತ್ತಿದ್ದಾರೆ.

ಈಕೆಗೆ ಬೆಟ್ಟಸ್ವಾಮಿ, ಶಿವಣ್ಣ, ಕಾಳಬೋರಯ್ಯ ಹಾಗೂ ಗಂಗಬೋರಯ್ಯ ಎಂಬ ನಾಲ್ವರು ಮಕ್ಕಳಿದ್ದಾರೆ. ಇವರೆಲ್ಲರೂ ಈ ವೃದ್ಧ ತಾಯಿಯನ್ನು ಕೆಲವು ತಿಂಗಳ ಹಿಂದೆ ಮನೆಯಿಂದ ಹೊರಹಾಕಿದ್ದರು. ರಸ್ತೆಯಲ್ಲಿ ಬಿದ್ದಿದ್ದ ಈ ವೃದ್ಧೆಯನ್ನು ಕಂಡು ಸ್ಥಳೀಯರು ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪಿಎಸ್‌ಐ ಗುರುಪ್ರಸಾದ್ ನಾಲ್ಕು ಮಕ್ಕಳನ್ನೂ ಕರೆಸಿ ಬುದ್ಧಿ ಹೇಳಿ ತಾಯಿಯನ್ನು ಮನೆಗೆ ಕರೆದೊಯ್ಯುವಂತೆ ಹೇಳಿದ್ದರು. ಕೊನೆಯ ಮಗ ಕಾಳಬೋರಯ್ಯ ತನ್ನ ಪತ್ನಿಯ ತವರು ಮನೆಯಲ್ಲೇ ವಾಸವಿರುವುದರಿಂದ ಕಿಚ್ಚವಾಡಿ ಗ್ರಾಮಕ್ಕೆ ತಾಯಿಯನ್ನು ಕರೆ ತಂದು ಮನೆಯ ಕೊಟ್ಟಿಗೆಯಲ್ಲಿ ಕೂಡಿಟ್ಟಿದ್ದಾನೆ. ವೃದ್ಧೆಗೆ ಅನ್ನ-ನೀರು ನೀಡದೆ, ಚಿಕಿತ್ಸೆ ಕೊಡಿಸದೆ ಕೊಟ್ಟಿಗೆಯಲ್ಲಿ ಇಟ್ಟಿರುವುದರಿಂದ ಆಕೆ ಪ್ರಾಣಿಯಂತೆ ಮೂಕ ವೇದನೆ ಅನುಭವಿಸುತ್ತಿದ್ದಾರೆ.

Write A Comment