ರಾಷ್ಟ್ರೀಯ

ಚೀನಾದಿಂದ ಬರುತ್ತಿದೆ ಪ್ಲಾಸ್ಟಿಕ್ ಅಕ್ಕಿ; ಆರೋಗ್ಯಕ್ಕೆ ಹಾನಿಕರ

Pinterest LinkedIn Tumblr

plastic-ricefffಹೊಸದಿಲ್ಲಿ: ಚೀನಾದಿಂದ ಪ್ಲಾಸ್ಟಿಕ್ ಅಕ್ಕಿ ಆಮದು ಆಗುತ್ತಿದ್ದು, ಭಾರತದಲ್ಲಿ ನೈಜ ಅಕ್ಕಿಯೊಂದಿಗೆ ಬೆರೆಸಿ ಮಾರಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲು ದಿಲ್ಲಿ ಹೈಕೋರ್ಟ್ ಸಮ್ಮತಿಸಿದ್ದು, ಮಾದರಿ ಪರೀಕ್ಷೆಗೆ ಸೂಚಿಸಿದೆ.

ಕೃತಕ ಅಕ್ಕಿ ಬಗ್ಗೆ ಆರೋಪಿಸಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಾೀಶೆ ಜಿ.ರೋಹಿಣಿ ಮತ್ತು ನ್ಯಾ.ಜಯಂತ್ ನಾಥ್ ಅವರನ್ನೊಳಗೊಂಡ ಪೀಠವು ಆಗಸ್ಟ್ 20ಕ್ಕೆ ಕಾಯ್ದಿರಿಸಿದೆ.

ಸಗಟು ಮಾರಾಟಗಾರರು ಮಾರುವ ಅಕ್ಕಿ, ಧಾನ್ಯಗಳು ಮತ್ತು ಹಣ್ಣುಗಳ ಮಾದರಿಗಳನ್ನು ಪರೀಕ್ಷಿಸಿ, ಸಾಮಾನ್ಯ ಜನರ ಆರೋಗ್ಯವನ್ನು ಕಲುಷಿತ ಆಹಾರದಿಂದ ರಕ್ಷಿಸಬೇಕು ಎಂದು ನ್ಯಾಯವಾದಿ ಸುಗ್ರೀವ ದುಬೆ ಅರ್ಜಿ ಸಲ್ಲಿಸಿದ್ದರು.

”ನೈಜ ಅಕ್ಕಿಯೊಂದಿಗೆ ಪ್ಲಾಸ್ಟಿಕ್ ಅಕ್ಕಿಯನ್ನು ಸೇವಿಸಿದಾಗ, ಜೀರ್ಣವಾಗದೆ, ಗ್ಯಾಸ್ಟ್ರಿಕ್‌ನಂಥ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಜಾಗತೀಕರಣದ ಪರಿಣಾಮವಾಗಿ ಅಕ್ಕಿ, ಧವಸ ಧಾನ್ಯಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದು, ಗುಣಮಟ್ಟವನ್ನು ಪರೀಕ್ಷಿಸುತ್ತಿಲ್ಲ,” ಎಂದು ಅರ್ಜಿಯಲ್ಲಿ ದುಬೆ ತಿಳಿಸಿದ್ದಾರೆ.

ಅಲ್ಲದೇ ಮಾವಿನಂಥಹಾ ಹಣ್ಣುಗಳನ್ನು ಕ್ಯಾಲ್ಸಿಯಂ ಕಾರ್ಬೈಡ್ ಹಾಗೂ ಇತರೆ ರಾಸಾಯನಿಕ ಬಳಸಿ ಮಾಗಿಸಲಾಗುತ್ತಿದೆ ಎಂದೂ ದುಬೆ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಹಣ್ಣು-ತರಕಾರಿಗಳಿಗೆ ನೀಡುವ ಕೃತಕ ಬಣ್ಣ ಹಾಗೂ ನಿಷೇತ ಕೀಟನಾಶಕಗಳ ಇರುವಿಕೆ ಬಗ್ಗೆಯೂ ದುಬೆ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

Write A Comment