ರಾಷ್ಟ್ರೀಯ

ಸಯಾಟಿಕಾ ನೋವಿಗೆ ಔಷಧ

Pinterest LinkedIn Tumblr

2‘ಸಯಾಟಿಕಾ’ ಇತ್ತೀಚೆಗೆ ಬಹಳ ವ್ಯಾಪಕವಾಗಿ ಹರಡುತ್ತಿರುವ ಕಾಯಿಲೆಯಾಗಿದೆ. ಈ ನೋವು ಹೇಳಲು ಅಸಾಧ್ಯವಾಗಿದ್ದು ದೈನಂದಿನ ಜೀವನವನ್ನೇ ಬುಡಮೇಲು ಮಾಡುತ್ತದೆ. ಪ್ರಪಂಚದಾದ್ಯಂತ ಮಿಲಿಯನ್‌ಗಟ್ಟಲೆ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬ್ಯೂರೋ ಆಫ್ ಲೇಬರ್ ಸ್ಟಾಟಿಸ್ಟಿಕ್ಸ್ ಪ್ರಕಾರ ಶೇ.62 ಜನ ಈ ನೋವಿನಿಂದಾಗಿ ಕೆಲಸಕ್ಕೆ ಗೈರು ಹಾಜರಾಗುತ್ತಾರೆ. ಆರಂಭದಲ್ಲಿಯೇ ಈ ಸಮಸ್ಯೆಯನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದರೆ ಖಂಡಿತ ಇದನ್ನು ಗುಣಪಡಿಬಹುದು. ಸಯಾಟಿಕಾ ಅಂದರೆ ಆಫರೇಷನ್‌ವರೆಗೂ ಹೋಗಬೇಕಾಗಿಲ್ಲ. ಯೋಗ, ಹೋಮಿಯೋ ಔಷಧಗಳು, ಪಿಜಿಯೋ ಥೆರಪಿಗಳಿಂದ ಗುಣಪಡಿಸಬಹುದು. ಹೋಮಿಯೋದಲ್ಲಿ ಯಾವ ಅಡ್ಡ ಪರಿಣಾಮವೂ ಆಗದೆ ಚಿಕಿತ್ಸೆ ಲಭ್ಯವಿದೆ.

ಶರೀರದಲ್ಲಿ ಎಲ್ಲಕ್ಕಿಂತ ದೊಡ್ಡದ್ದು ಸಯಾಟಿಕಾ ನರ. ಕೆಳಗಿನ ಬೆನ್ನು ಭಾಗದಿಂದ ಹಿಡಿದು ಪಕ್ಕೆಲುಬಿನಿಂದ ಕಾಲಿನ ಹಿಂದಿನ ಭಾಗದಲ್ಲಿ ಪ್ರಯಾಣಿಸುವ ಮುಖ್ಯವಾದ ನರ ಇದು.

ಈ ನರವು ಇತರೆ ಐದು ನರಗಳ ಸಮೂಹದಿಂದ ಏರ್ಪಡುವುದು. ಬೆನ್ನುಹುರಿಯ ಒಳಗಿನಿಂದ ಪ್ರಯಾಣಿಸುವ ನರಗಳ ಒತ್ತಡದಿಂದ ಕಾಲಿನ ಹಿಂದಿನ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು. ಅದನ್ನು ಸಯಾಟಿಕಾ ಎನ್ನುವರು.

ಈ ನೋವು ಬೆನ್ನು ಹುರಿಯ ಭಾಗದಿಂದ ಮೊದಲಾಗಿ ಪಕ್ಕೆಲುಬಿನಿಂದ ತೊಡೆ, ಕಾಲಿನ ಹಿಂಬದಿವರೆಗೂ ಹರಿಯುತ್ತದೆ. ಸ್ಪರ್ಶಾನುಭವ ಕುಂಠಿಸುವುದು, ಬೆಂಕಿಯ ಉರಿಯಂತಹ ಅನುಭವ, ನೋವಿರುವ ಭಾಗ ಜುಮ್ ಎನ್ನುವುದು, ನಡೆಯಲ್ಲಿ ಬದಲಾವಣೆ ಇವೆಲ್ಲಾ ಈ ಸಮಸ್ಯೆಯ ಮುಖ್ಯ ಲಕ್ಷಣಗಳು.

ಕಾರಣಗಳು: ನರ್ವ್ ಕಂಪ್ರೆಷನ್: ನರಗಳ ಬೇರುಗಳು ಒತ್ತಲ್ಪಡುವುದರಿಂದ ನೋವು ಕಾಣಿಸಿಕೊಳ್ಳುತ್ತದೆ.

ಸ್ಪೈನಲ್ ಡಿಸ್ಕ್ ಹೆರ‌್ನಿಯೋಷನ್: ನರಗಳ ಬೇರುಗಳಿಗೆ ಒತ್ತಡವಾದಾಗ ಪಕ್ಕಕ್ಕೆ ತಿರುಗಿದರೆ ನೋವು ಬರುತ್ತದೆ.

ಪೆರಿಫಾರ‌್ಮಿಸ್ ಸಿಂಡ್ರೋಮ್: ಪೆಟ್ಟು, ಗಾಯ ಬೀಳುವಾಗ ಪೆರಿಷ್ಮಾರಿಸ್ ಮಾಂಸ ಖಂಡಗಳ ನರ್ವ್ ರೂಟ್ಸ್ ಪ್ರೆಸ್ ಆಗುವುದು. ಹಾಗಾಗಿ ಸಯಾಟಿಕಾ ನೋವು ಬರುವುದು.

ಸಾಕ್ರಾಇಲಿಯಕ್ ಜಾಯಿಂಟ್ ಡಿಸ್ಕ್: ಶಾರೀರಿಕ ಶ್ರಮ, ವ್ಯಾಯಾಮ ಇರದೆ ಕೀಲು ನರಗಳು ಸರಿಯಾಗಿ ಕೆಲಸ ಮಾಡದೆ ಸಯಾಟಿಕಾ ನೋವು ಬರುತ್ತದೆ.

ಪ್ರೆಗ್ನೆಸ್ಸಿ: ಪ್ರೆಗ್ನೆಸ್ಸಿ ಕೊನೆಯ ತಿಂಗಳಲ್ಲಿ ಭ್ರೂಣವು ಭಾರವಾಗಿ ಬೆಳೆದು ನರ್ವ್ ರೂಟ್ಸ್ ಪ್ರೆಸ್ ಆಗುವುದರಿಂದ ಸಯಾಟಿಕಾ ನೋವು ಬರುವುದು.

ಪರೀಕ್ಷೆಗಳು: ವೈದ್ಯರ ಸಮ್ಮುಖದಲ್ಲಿ ಕೆಲವು ವ್ಯಾಯಾಮ, ಕೆಲವು ಪರೀಕ್ಷೆಗಳನ್ನು ನಡೆಸಬೇಕು. ಇದಕ್ಕೆ ಸೂಕ್ತ ಚಿಕಿತ್ಸೆ ತೆಗೆದುಕೊಂಡರೆ ನೋವು ನಿವಾರಣೆಯಾಗುತ್ತದೆ.

ಎಂಆರ್‌ಐ ಸ್ಕಾನ್: ರಿಡೆರ್ನಿಯೋಷನ್, ಬಿಸ್ಕ್ ಪ್ರಾಲಾಪ್ಸ್, ಏನರ್ಸ್ ರೂತ್ ಪರೀಕ್ಷಗಳಿಂದ ದೃಢ ಪಡಿಸಬಹುದು.

ನೋವು ಬಂದರೆ ಯಾವುದೋ ಒಂದು ಮಾತ್ರೆ ತೆಗೆದುಕೊಂಡರೆ ಕಡಿಮೆ ಆಗಬಹುದು. ನೋವಿನ ಮಾತ್ರೆಗಳನ್ನು ದಿನಾಲು ಸೇವಿಸಿದರೆ ಬಹಳಷ್ಟು ಸೈಡ್ ಇಫೆಕ್ಟ್ ಆಗುತ್ತದೆ. ಮುಖ್ಯವಾಗಿ ಜೀರ್ಣಕೋಶದ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಹೋಮಿಯೋ ವೈದ್ಯ ವಿಧಾನಗಳು: ಸಯಾಟಿಕಾ ನೋವಿಗೆ, ಬೆನ್ನುಹುರಿ ನೋವಿಗೆ ಹೋಮಿಯೋಪತಿಯಲ್ಲಿ ಒಳ್ಳೆಯ ಚಿಕಿತ್ಸೆ ಲಭ್ಯವಿದೆ. ಎಕ್ಸ್ ರೇ ಹಾಗೂ ಎಮ್‌ಆರ್‌ಐ ಮೂಲಕ ನೋವಿನ ಕಾರಣ ಕಂಡು ಹಿಡಿಯುತ್ತಾರೆ. ಜೊತೆಗೆ ಶಸ್ತ್ರ ಚಿಕಿತ್ಸೆ ಇಲ್ಲದೆ ಸಂಪೂರ್ಣ ಗುಣಮುಖರಾಗುವಂತೆ ಮಾಡಲಾಗುತ್ತದೆ.

ರೆಸಟಾಕ್ಸ್:ಇದು ಮಾಂಸ ಖಂಡಗಳಿಗೆ ಚಾಚಿ ನೋವು ಉಂಟು ಮಾಡುತ್ತದೆ. ನೋವಿನ ಜೊತೆಗೆ ಜುಮ್ ಎನಿಸುವ ಸೆನ್ಸೆಷನ್ ಇರುತ್ತದೆ. ಒಮ್ಮೆ ಕೂತು ಎದ್ದರೆ ನೋವು ವಿಪರೀತ ಅನಿಸುತ್ತದೆ. ಸ್ವಲ್ಪ ಸಮಯ ನಡೆದರೆ ಕೊಂಚ ಆರಾಮ ಎನಿಸುತ್ತದೆ. ರೆಸಟಾಕ್ಸ್ ಸರ್ವೈಕಲ್ ಸ್ಯಾಂಡಿಲೋಸಿಸ್ ಸ್ಟಾಂಡಿರೋ ಸಾಸಿಕೊ ಒಳ್ಳೆಯ ಔಷಧ.

ಕಿಲೋಸಿಂಥ್: ನರಗಳು ಹಿಡಿದಂತಾಗುತ್ತದೆ. ಈ ನೋವು ಪಕ್ಕೆಲುಬಿನಿಂದ ಮೊಣಕಾಲು, ಪಾದದವರೆಗೂ ವ್ಯಾಪಿಸುತ್ತದೆ. ತಣ್ಣನೆಯ ವಾತಾವರಣದಲ್ಲಿ ನೋವು ಅಧಿಕವಾಗುವುದು.

ರೊಡೊಡೆಸ್ ಡ್ರೆನ್: ಸರ್ವೈಕಲ್ ಸ್ಟಾಂಡಿಲೋಸಿಸ್ ಇದು ಒಳ್ಳೆಯ ಔಷಧ. ಬೇಸಿಗೆಯಲ್ಲಿ ನೋವು ಅಧಿಕವಾಗುತ್ತದೆ. ಕುತ್ತಿಗೆ ಭಾಗದಿಂದ ನೋವು ಭುಜಗಳವರೆಗೆ ವ್ಯಾಪಿಸುವುದು. ವಿಶ್ರಾಂತಿ ತೆಗೆದುಕೊಂಡರೆ ನೋವು ಹೆಚ್ಚಾಗುವ ಸಾಧ್ಯತೆ ಇದೆ. ವಾತಾವರಣ ಬದಲಾವಣೆಯಿಂದ ನೋವು ಕಾಣಿಸಿಕೊಳ್ಳುತ್ತದೆ.

ಕಾಸ್ಟಕಮ್: ಮಾಂಸ ಖಂಡಗಳು ಶಕ್ತಿ ಕಳೆದುಕೊಂಡು ಭರಿಸಲಾಗದ ನೋವು ಕಾಣಿಸಿಕೊಳ್ಳುತ್ತದೆ. ಕುತ್ತಿಗೆ ಭಾಗದಲ್ಲಿ ನೋವು ಇದ್ದು ಭುಜಗಳ ಮಧ್ಯೆ ಸ್ಟಿಫ್‌ನೆಸ್ ಇರುವುದು. ಎಡಗಡೆ ಬರುವ ಸಯಾಟಿಕಾ ನೋವಿಗೆ ಒಳ್ಳೆಯ ಔಷಧ.

Write A Comment