ಕನ್ನಡ ವಾರ್ತೆಗಳು

ಗಾಲ್ಫ್ ಕೋರ್ಸ್ ಮತ್ತು ಅಕ್ವಾ ಮೆರೈನ್ ಪಾರ್ಕ್ ಸ್ಥಾಪನೆಗೆ ಸರಕಾರದಿಂದ 155 ಎಕರೆ ಜಮೀನು ಮೀಸಲು.

Pinterest LinkedIn Tumblr

tourist_minstar_rv_despande

ಮಂಗಳೂರು,ಜುಲೈ.03  : ಬೆಂಗ್ರೆ ಕಸಬಾ ಗ್ರಾಮದಲ್ಲಿ ಗಾಲ್ಫ್ ಕೋರ್ಸ್ ಹಾಗೂ ಅಕ್ವಾ ಮೆರೈನ್ ಪಾರ್ಕ್ ಸ್ಥಾಪನೆಗೆ ಸರಕಾರ 155 ಎಕರೆ ಜಮೀನು ಕಾಯ್ದಿರಿಸಿದೆ ಎಂದು ಪ್ರವಾಸೋದ್ಯಮ ಸಚಿವ ಅರ್.ವಿ.ದೇಶಪಾಂಡೆ ಹೇಳಿದರು. ವಿಧಾನ ಪರಿಷತ್‌ನಲ್ಲಿ ಗುರುವಾರ ಸದಸ್ಯ ಐವನ್ ಡಿಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಲವು ಷರತ್ತುಗಳಂತೆ ಭೂಮಿ ನೀಡಲಾಗಿದೆ ಎಂದರು.

ಈ ಜಮೀನು ಭೂಕಂದಾಯ ಕಾಯಿದೆ- 1964ರ ಕಲಂ 71ರಡಿ ಪ್ರವಾಸೋದ್ಯಮ ಇಲಾಖೆಗೆ ಕಾಯ್ದಿರಿಸಿ ಹಸ್ತಾಂತರಿಸಿ, ಜಮೀನಿನ ಒಡೆತನವು ಪ್ರವಾಸೋದ್ಯಮ ಇಲಾಖೆಯಲ್ಲಿಯೇ ಇರಲಿದೆ. ಇಲ್ಲಿ ಅರಣ್ಯ ಪ್ರದೇಶವಿರದೆ, ಕಂದಾಯ ಭೂಮಿ ನೀಡಲಾಗಿದೆ ಎಂದು ದೇಶಪಾಂಡೆ ಹೇಳಿದರು.

Write A Comment