ರಾಷ್ಟ್ರೀಯ

ಬಿಜೆಪಿ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ ಲಲಿತ್ ಮೋದಿ

Pinterest LinkedIn Tumblr

lalith27

ನವದೆಹಲಿ/ಲಂಡನ್, ಜು.2: ಹವಾಲಾ ಹಣ ಅವ್ಯವಹಾರದ ಪ್ರಮುಖ ವಿವೇಕ್ ನಾಗ್‌ಪಾಲ್ ಜತೆಗಿನ ನಂಟು ಬಹಿರಂಗಪಡಿಸುವಂತೆ ಬಿಜೆಪಿ ಹಿರಿಯ ನಾಯಕ ಸುಧಾಂಶು ಮಿತ್ತಲ್‌ರನ್ನು ಒತ್ತಾಯಿಸುವ ಮೂಲಕ ಐಪಿಎಲ್ ಕಳ್ಳಾಟದ ರೂವಾರಿ ಲಲಿತ್‌ಮೋದಿ, ಪ್ರಧಾನಿ ಮೋದಿ ಸರ್ಕಾರಕ್ಕೆ ಮತ್ತೊಂದು ಹೊಡೆತ ನೀಡಿದ್ದು, ವಿಪಕ್ಷ ಕಾಂಗ್ರೆಸ್‌ನ ಬತ್ತಳಿಕೆಗೆ ಶಸ್ತ್ರವೊಂದನ್ನು ಒದಗಿಸಿದ್ದಾನೆ.

ಗುರುವಾರ ಬೆಳಗ್ಗೆ ಬಿಜೆಪಿಯನ್ನೇ ಗುರಿಯಾಗಿಟ್ಟುಕೊಂಡು ಲಲಿತ್ ಮೋದಿ, ಹಿರಿಯ ನಾಯಕ ಸುಧಾಂಶು ಮಿತ್ತಲ್ ಅವರ ಮೇಲೇ ಈಗ ಹವಾಲಾ ನಂಟಿನ ಬಗ್ಗೆ ಗಂಭೀರ ಆರೋಪ ಮಾಡಿದ್ದಾನೆ. ಕೇಂದ್ರ ಎನ್‌ಡಿಎ ಸರ್ಕಾರದ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ಪಕ್ಷಕ್ಕೆ ಲಲಿತ್ ಮೋದಿಯ ಈ ಹೊಸ ಬಾಂಬ್ ಒಂದು ವರದಾನವಾಗಿದೆ.

ಹವಾಲಾ ಖದೀಮ ವಿವೇಕ್ ನಾಗ್‌ಪಾಲ್‌ಗೂ ಸುಧಾಂಶು ಮಿತ್ತಲ್ ಅವರಿಗೂ ಇರುವ ಸಂಬಂಧವೇನು, ಅದು ಯಾವ ಸ್ವರೂಪದ್ದು ಎಂಬುದನ್ನು ಅವರು ನನಗೆ ವಿವರಿಸಿ ಹೇಳಬೇಕು. ನಾನು ಅದನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಲಲಿತ್‌ಮೋದಿ ಟ್ವೀಟರ್ ಮೂಲಕ ಸುದ್ದಿ ನೀಡಿದ್ದಾನೆ.

ವಿಶೇಷವಾಗಿ ಗಮನಿಸಬೇಕಾದ ವಿಷಯವೆಂದರೆ ಕಳೆದ ಜನವರಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆಪ್ತ ಸಹಾಯಕ ಒಮಿತ್‌ಪಾಲ್ ಹಾಗೂ ದೇಶದ ಅತಿದೊಡ್ಡ ಹವಾಲಾ ಹಗರಣದ ಆರೋಪಿ ವಿವೇಕ್ ನಾಗ್‌ಪಾಲ್ ಅವರ ನಡುವಣ ಸಂಬಂಧದ ಬಗ್ಗೆ ಲಲಿತ್ ಮೋದಿ ನೇರ ಆರೋಪ ಮಾಡಿದ್ದ. ಪ್ರಸ್ತುತ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ, ಸಂಸದ ವರುಣ್‌ಗಾಂಧಿ ಸೇರಿದಂತೆ ಸಾಲು ಸಾಲಾಗಿ ಬಿಜೆಪಿ ನಾಯಕರ ವಿರುದ್ಧದ ಆರೋಪಗಳನ್ನು ತೆರೆದಿಟ್ಟಿರುವ ಮೋದಿ ಇದೀಗ ಸುಧಾಂಶು ಅವರನ್ನು ತನ್ನ ಗುರಿಯಾಗಿ ಮಾಡಿಕೊಂಡಿದ್ದಾನೆ. ಹಾಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ, ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲ ಅವರೂ ಕೂಡ ಮೋದಿ ಬಲೆಯಲ್ಲಿ ಸಿಲುಕಿದ್ದಾರೆ.

Write A Comment