ರಾಷ್ಟ್ರೀಯ

ಸುಷ್ಮಾ-ಲಲಿತ್‌ ವಿವಾದ; ಮನ್‌ ಕೀ ಬಾತ್‌ನಲ್ಲಿ ಸ್ಪಷ್ಟನೆ ನೀಡಲಿ: ಕಾಂಗ್ರೆಸ್‌

Pinterest LinkedIn Tumblr

mann-ki

ಹೊಸದಿಲ್ಲಿ: ಐಪಿಎಲ್ ಫಿಕ್ಸಿಂಗ್ ಹಗರಣದ ಪ್ರಮುಖ ಆರೋಪಿ ಲಲಿತ್ ಮೋದಿಗೆ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ನೆರವು ನೀಡಿರುವ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿವರಣೆ ನೀಡಬೇಕೆಂದು ಕಾಂಗ್ರೆಸ್‌ ಮಂಗಳವಾರವೂ ತನ್ನ ಪಟ್ಟು ಮುಂದುವರಿಸಿದೆ.

‘ಲಲಿತ್‌ ಮೋದಿಗೆ ಸುಷ್ಮಾ ಸ್ವರಾಜ್‌ ನೆರವು ನೀಡಿದ್ದ ವಿಷಯ ಪ್ರಧಾನಿಗೆ ತಿಳಿದಿರಲಿಲ್ಲ ಎಂಬ ವಿಷಯವನ್ನು ನಂಬಲಾಗುತ್ತಿಲ್ಲ. ‘ಮನ್ ಕೀ ಬಾತ್‌’ ಕಾರ್ಯಕ್ರಮದಲ್ಲಿ ಪ್ರಧಾನಿ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಲಿ,’ ಎಂದು ಕಾಂಗ್ರೆಸ್‌ ನಾಯಕ ಅಜಯ್ ಕುಮಾರ್‌ ಹೇಳಿದ್ದಾರೆ.

‘ಸುಷ್ಮಾ ಅವರ ನಿರ್ಧಾರ ಸಮಂಜಸವೇ, ಇಲ್ಲವೇ ಎಂಬುದನ್ನು ಪ್ರಧಾನಿ ಮೋದಿ ಹಾಗೂ ಅರುಣ್‌ ಜೇಟ್ಲಿ ಸ್ಪಷ್ಟಪಡಿಸಲಿ. ಸುಷ್ಮಾ ಬಗ್ಗೆ ನನಗೆ ಅಪಾರ ಗೌರವ ಇದೆ. ಆದರೆ, ಇದು ಸಣ್ಣ ವಿಷಯಲ್ಲ. ಜೇಟ್ಲಿ ಏಕೆ ಮೌನವಹಿಸಿದ್ದಾರೆ,’ ಎಂದು ದಿಗ್ವಿಜಯ್‌ ಸಿಂಗ್ ಪ್ರಶ್ನಿಸಿದ್ದಾರೆ.

ಕಾಳ ಧನಿಕ ಲಲಿತ್ ಮೋದಿಗೆ ನೆರವು ನೀಡಿರುವ ಸುಷ್ಮಾ ಅವರನ್ನು ಸ್ಥಾನದಿಂದ ಕೆಳಗಿಳಿಸಬೇಕು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಆಗ್ರಹಿಸಿದ್ದರು.

Write A Comment