ರಾಷ್ಟ್ರೀಯ

ಮೂವರು ಸಿಬ್ಬಂಧಿಗಳಿದ್ದ ಕರಾವಳಿ ಕಾವಲು ಪಡೆಯ ಯುದ್ಧ ವಿಮಾನ ನಾಪತ್ತೆ

Pinterest LinkedIn Tumblr

Missing-plane11

ಚೆನ್ನೈ, ಜೂ.9: ತಮಿಳುನಾಡು ಕರಾವಳಿ ಕಾವಲು ಪಡೆಯ ಡೋರ್ನಿಯರ್ ಯುದ್ಧ ವಿಮಾನವೊಂದು ಮೂವರು ಸಿಬ್ಬಂದಿಯೊಂದಿಗೆ ನಾಪತ್ತೆಯಾಗಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ.

ಚೆನ್ನೈ ನೌಕಾ ನೆಲೆಯಿಂದ ನಿನ್ನೆ ಸಂಜೆ 5.30 ರ ಸುಮಾರಿನಲ್ಲಿ ಪುದುಚೇರಿಯತ್ತ ಹೊರಟಿದ್ದ ಈ ಕಾವಲು ಪಡೆ ಯುದ್ಧ ವಿಮಾನ ನಂತರ ಸುಮಾರು 10 ಗಂಟೆ ವೇಳೆಗೆ ನೆಲೆಯಿಂದ ಸಂಪರ್ಕ ಕಡಿದುಕೊಂಡಿದ್ದು, ಚೆನ್ನೈಯಿಂದ 95 ಮೈಲುಗಳ ಅಂತರದಲ್ಲಿ ತಿರುಚಿರಾಪಳ್ಳಿಯಿಂದ ಸಂಪರ್ಕ ಸ್ಥಗಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರಾವಳಿ ಕಾವಲು ಪಡೆಯ ಐದು ಹಡಗುಗಳು, ನೌಕಾಪಡೆಯ ನಾಲ್ಕು ಹಡಗುಗಳು ಹಾಗೂ ವಾಯುಪಡೆಯ P81 ವಿಮಾನಗಳು ನಾಪತ್ತೆಯಾಗಿರುವ ಯುದ್ಧ ವಿಮಾನದ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿವೆ. ಈ ಯುದ್ಧ ವಿಮಾನವು ದಿನದ ಮಾಮೂಲಿಯಂತೆ ಗಸ್ತು ಪಹರೆ ತಿರುಗುತ್ತಿದ್ದಾಗ ಈ ರೀತಿ ನಾಪತ್ತೆಯಾಗಿದೆ ಎಂದು ಕರಾವಳಿ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

Write A Comment