ಅಂತರಾಷ್ಟ್ರೀಯ

ಈಕೆಯ ಕೂದಲು ಬಣ್ಣ ಬದಲಾಯಿಸುತ್ತೆ !! – Video News

Pinterest LinkedIn Tumblr

9578sabrina_759

ಬಣ್ಣ ಬದಲಾಯಿಸುವ ಗೊಸುಂಬಿಯನ್ನು ನೀವು ನೋಡಿರಬಹುದು. ಅಥವಾ ಬೇರೆ ಬೇರೆ ಬಣ್ಣಗಳ ತಲೆಯ ಕೂದಲು ಹೊಂದಿರುವ ವ್ಯಕ್ತಿಗಳನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬಳ ತಲೆಕೂದಲು ಅದರಷ್ಟಕ್ಕೆ ಅದು ಬದಲಾಗುವ ಮೂಲಕ ಅಚ್ಚರಿಗೆ ಕಾರಣವಾಗಿದೆ.

ಹೌದು. ಫ್ಲೋರಿಡಾ ಮೂಲದ ಗಾಯಕಿ ಸಬಿರಾನ ಅಬು ರಯಡ್ ಈಗ ತನ್ನ ವಿಶಿಷ್ಟ ಕೂದಲಿನ ಮೂಲಕ ವಿಶ್ವದೆಲ್ಲಡೆ ಸುದ್ದಿಯಾಗುತ್ತಿದ್ದು ಬಣ್ಣ ಬದಲಾಯಿಸುವ ಈಕೆಯ ಕೂದಲ ಬಗೆಗೆ ಭಾರೀ ಚರ್ಚೆ ನಡೆಯುತ್ತಿದೆ.

ಈಕೆಯ ಸ್ನೇಹಿತನೊಬ್ಬ ಇತ್ತೀಚೆಗೆ ಆಕೆಯ ಮನೆಗೆ ತೆರಳಿದ್ದು ಆಕೆ ಮನೆಯ ಕೊಠಡಿಗಳಿಗೆ ಹೋದಂತೆ ಆಕೆ ತಲೆಯ ಕೂದಲಿನ ಬಣ್ಣ ಬದಲಾಗುತ್ತಿರುವುದನ್ನು ನೋಡಿದ್ದಾನೆ. ಕೂಡಲೇ ತನ್ನ ಮೊಬೈಲ್‍ನಲ್ಲಿ ಈಕೆ ಕೂದಲು ಬಣ್ಣ ಬದಲಾಗುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದು ಯೂ ಟ್ಯೂಬ್‍ಗೆ ಅಪ್‍ಲೋಡ್ ಮಾಡಿದ್ದಾನೆ.

ಮೇ 19ಕ್ಕೆ ವಿಡಿಯೋ ಅಪ್‍ಲೋಡ್ ಆಗಿದ್ದು. ಈಗಾಗಲೇ 9 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋವನ್ನು ವೀಕ್ಷಿಸಿದ್ದಾರೆ. ಬೆಳಕು ಬದಲಾವಣೆಯಿಂದಾಗಿ ಈ ರೀತಿ ಕೂಲಿನ ಬಣ್ಣ ಆಗಾಗ ಬದಲಾಗುತ್ತಿದೆ ಎಂದು ವಿಡಿಯೋ ನೋಡಿದ ಕೆಲವು ಮಂದಿ ಹೇಳಿದ್ದರೆ ಇನ್ನೂ ಕೆಲವರು ಇದೊಂದು ಅಚ್ಚರಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

%VIDEO%

Write A Comment