ಕರ್ನಾಟಕ

ಹಾಲು ಕುಡಿದ ಶಿರಡಿ ಸಾಯಿ ಬಾಬಾ ವಿಗ್ರಹ ..!

Pinterest LinkedIn Tumblr

Shiradi-Sai-baba

ಗೌರಿಬಿದನೂರು,ಮೇ24- ಜನ ಮರಳೋ..ಜಾತ್ರೆ ಮರಳೋ ಎಂಬಂತೆ ಪಟ್ಟಣದ ಕರೇಕಲ್ಲಹಳ್ಳಿ ಬಡಾವಣೆಯ ಲಕ್ಷ್ಮಿಅಂಬರೀಶ್ ಬಾಬು ಎಂಬುವವರ ಮನೆಯಲ್ಲಿ ಸಾಯಿಬಾಬ ವಿಗ್ರಹ ಹಾಲು ಕುಡಿಯುತ್ತಿದೆ ಎಂಬ ಸುದ್ದಿ ಪಟ್ಟಣದಾದ್ಯಂತ ಹರಡಿಕೊಂಡು ಜನ ತಂಡೋಪ ತಂಡವಾಗಿ ಬರುತ್ತಿದ್ದಾರೆ.

ನಡೆದಿದ್ದೇನು: ಪಟ್ಟಣದ ಕರೇಕಲ್ಲಹಳ್ಳಿ ಬಡಾವಣೆಯ ಲಕ್ಷ್ಮಿಅಂಬರೀಶ್ ರವರು ಕಳೆದೆರಡು ವಾರಗಳಿಂದ ಶ್ರೀ ಶಿರಡಿಸಾಯಿಬಾಬ ವ್ರತ ಮಾಡುತ್ತಿದ್ದು, ಪ್ರತಿ ಗುರುವಾರ ಬೆಳಿಗ್ಗೆ ಬಾಬಾ ವಿಗ್ರಹಕ್ಕೆ ಅಬಿಷೇಕ ಮಾಡಿ ಹಣ್ಣು ಹಂಪಲು ವಿವಿಧ ಖಾದ್ಯಗಳನ್ನು ನೈವೇದ್ಯ ಮಾಡುತ್ತಿದ್ದರು.   ಕಳೆದ ಗುರುವಾರ ಸಂಜೆ ಪೂಜೆ ಮುಗಿಸಿ ಹಾಲು ಸಕ್ಕರೆ ನೈವೇದ್ಯ ಮಾಡುವಾಗ ಉದ್ದರಣೆ(ಚಮಚ) ಯಿಂದ ಹಾಲನ್ನು ಬಾಬಾ ವಿಗ್ರಹದ ಬಾಯಿಗೆ ಇಟ್ಟಾಗ ಹಾಲು ಹೀರಿಕೊಂಡಂತಾಗಿದೆ. ಮತ್ತೊಮ್ಮ, ಮಗದೊಮ್ಮೆ ಹಾಲನ್ನು ಚಮಚದಲ್ಲಿ ಬಾಬಾ ವಿಗ್ರಹದ ಬಳಿ ಇಟ್ಟಾಗ ಹಾಲು ತಾನಾಗಿಯೇ ಕುಡಿಯುತ್ತಿದೆ, ಪೂಜೆಯ ಫಲದಿಂದ ಬಾಬಾ ಹಾಲು ಸ್ವೀಕರಿಸುತ್ತಿದ್ದಾನೆ ಎಂಬು ಸಂತೋಷವಾಗುತ್ತಿದೆ ಎನ್ನುತ್ತಾರೆ ಲಕ್ಷ್ಮೀಅಂಬರೀಶ್.

ಬಾಬಾ ಹಾಲುಕುಡಿಯೋಲ್ಲ: ಯಾವುದೇ ಘನ ವಸ್ತುಗಳ ಅಣುಗಳಲ್ಲಿ ಸಂಲಗ್ನತ್ವ ಗುಣವನ್ನು ಹೊಂದಿರುತ್ತದೆ ಹಾಗೂ ಅತಿಹೆಚ್ಚು ಆಕರ್ಷಕ ಶಕ್ತಿ ಇರುವುದರಿಂದ  ದ್ರವರೂಪದ ವಸ್ತುವನ್ನು ಹೀರಿಕೊಳ್ಳುವ (ಸ್ಪರ್ಷಣೆ) ಗುಣವಿರುತ್ತದೆ ಅಷ್ಟೇ, ಇದು ವೈಜ್ಞಾನಿಕವಾದ ಸತ್ಯ, ದೇವರ ಮೇಲೆ ನಂಬಿಕೆ ಇರಲಿ, ಆದರೆ ಮೂಢನಂಬಿಕೆಗಳಿಗೆ ಮಾರುಹೋಗಬೇಡಿ.

Write A Comment