ಮಿಲನ ಮಹೋತ್ಸವಕ್ಕೆ ಯಾವ ಹೊತ್ತು ಬೆಸ್ಟ್ ಅಂದರೆ ರಸಿಕರು ಯಾವತ್ತಾದ್ರೂ ನಮಗೆ ಚಿಂತೆ ಇಲ್ಲ ಬಿಡಿ ಅಂತಾ ಬಾಯಿಬಿಟ್ಟು ಹೇಳಬಹುದು! ಆದರೆ ಸಾಮಾನ್ಯ ಜನರ ಆಲೋಚನೆ, ಆಸಕ್ತಿಯೇ ಬೇರೆ. ಸಮೀಕ್ಷೆಯೊಂದರ ಪ್ರಕಾರ ಗಂಡಸರು ನಮಗೆ ಬೆಳಗಿನ ಜಾವ ಸೆಕ್ಸ್‌ಗೆ ಬೆಸ್ಟ್ ಅಂದರೆ ಮಹಿಳೆಯರು ರಾತ್ರಿಯೇ ಸೂಪರ್ ಅಂತಾ ಹೇಳಿದ್ದಾರೆ.
ಹೆಚ್ಚಿನ ಪುರುಷರು ಕೆಲಸ ಅದು ಇದೂ ಅಂತಾ ಸುಸ್ತಾಗಿರುತ್ತೆ. ಚೆನ್ನಾಗಿ ನಿದ್ದೆ ಹೊಡೆದ್ರೆ… ಬೆಳಗ್ಗೆ ಸೆಕ್ಸ್ ಸೂಪರ್ ಆಗಿರುತ್ತೆ ಎಂದು ಹೇಳಿದ್ದಾರೆ. ಪುರುಷರ ಪ್ರಕಾರ ಬೆಳಗ್ಗೆ 7 ಗಂಟೆ ಬೆಸ್ಟಂತೆ. ಇನ್ನು ರಾತ್ರಿ ಪ್ರಶಾಂತ. ಕಿರಿಕಿರಿ ಇಲ್ಲ. ಸಂಗಾತಿ ಬಳಿ ಪ್ರೀತಿಸುವುದಕ್ಕೆ ಅದೇ ಸಮಯ ಎಂದು ಮಹಿಳೆಯರು ನಾಚಿಕೊಂಡಿದ್ದಾರಂತೆ.
ಇನ್ನು ನಿದ್ದೆಗೂ ಮುನ್ನ ಸೆಕ್ಸ್‌ನಲ್ಲಿ ಭಾಗಿಯಾಗುವವರಲ್ಲಿ ಪುರುಷರ ಸಂಖ್ಯೆ ಕೇವಲ ಶೇ.16ರಷ್ಟಿದೆಯಂತೆ. ಮಹಿಳೆಯರಲ್ಲಿ ಶೇ.11ರಷ್ಟಿದೆಯಂತೆ. ಮಹಿಳೆಯರ ಪ್ರಕಾರ ರಾತ್ರಿ 11ರಿಂದ ಬೆಳಗ್ಗಿನ ಜಾವ 2ಗಂಟೆ ಸೆಕ್ಸ್‌ಗೆ ಅತ್ಯಂತ ಪ್ರಶಸ್ತ. ಮತ್ತೆಲ್ಲಾ ಮೂಡ್ ಮೇಲೆ ನಿರ್ಧಾರವಾಗುತ್ತೆ ಅಂತಾ ಮಹಿಳೆಯರು ಹೇಳಿದ್ದಾರಂತೆ. ಬಹುತೇಕ ಪುರುಷರು ದಿನದ ಕೆಲಸದ ಒತ್ತಡದಿಂದ ರಾತ್ರಿ ಹೊತ್ತು ಮಿಲನಕ್ಕೆ ಹಾತೊರೆಯುವುದು ಕಡಿಮೆ. ಅದಕ್ಕೇ ಬೆಳಗ್ಗೆ ಎಂದು ಹೇಳುತ್ತಾರೆ ಎಂದು ಸಮೀಕ್ಷೆ ಹೇಳಿದೆ.
-ಉದಯವಾಣಿ
