ಬೀಜಿಂಗ್, ಮೇ 9: ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಚೀನಾದ ಪ್ರಪ್ರಥಮ ಗಾಂಧಿ ಅಧ್ಯಯನ ಕೇಂದ್ರವನ್ನು ಶಾಂಘಾಯಿಯ ುದಾನ್ ವಿಶ್ವವಿದ್ಯಾಲಯದಲ್ಲಿ ಉದ್ಘಾಟಿಸಲಿದ್ದಾರೆ. ಅವರು ಮೇ 14ರಿಂದ ಕೈಗೊಳ್ಳಲಿರುವ ತನ್ನ ಮೂರು ದಿನಗಳ ಚೀನಾ ಪ್ರವಾಸದ ವೇಳೆ ಆ ದೇಶದಲ್ಲಿ ಯೋಗ ಕಾಲೇಜೊಂದರ ಸ್ಥಾಪನೆಯನ್ನೂ ಘೋಷಿಸಲಿದ್ದಾರೆ.
ಗಾಂಧಿ ಅಧ್ಯಯನ ಕೇಂದ್ರವನ್ನು ಚೀನಾದ ುದಾನ್ ವಿವಿಯಲ್ಲಿ ಸ್ಥಾಪಿಸಲಾಗುವುದು. ಅದಕ್ಕೆ ಬೇಕಾದ ಸಿಬ್ಬಂದಿಯನ್ನು ಸಾಂಸ್ಕೃತಿಕ ಸಂಬಂಧಗಳ ಭಾರತೀಯ ಮಂಡಳಿ (ಐಸಿಸಿಆರ್) ಒದಗಿಸಲಿದೆಯೆಂದು ಅಕಾರಿಗಳಲ್ಲಿ ತಿಳಿಸಿದ್ದಾರೆ. ವಿವಿಯಲ್ಲಿ ಈಗಾಗಲೇ ಭಾರತೀಯ ಅಧ್ಯಯನಗಳ ಕೇಂದ್ರವಿದೆ.
ಈ ಹಿಂದೆ ಚೀನಿ ಭಾಷೆಯಲ್ಲಿ ಗಾಂ ವಿಚಾರಧಾರೆಯ ಕುರಿತಾದ ಕೆಲವು ಪುಸ್ತಕಗಳನ್ನು ಪ್ರಕಟಿಸಲಾಗಿದ್ದರೂ, ಚೀನಾದಲ್ಲಿ ಗಾಂಧಿ ಅಧ್ಯಯನಕ್ಕೆಂದೇ ಮೀಸಲಾದ ಕೇಂದ್ರವೊಂದು ಸ್ಥಾಪಿಸಲ್ಪಡುತ್ತಿರುವುದು ಇದೇ ಮೊದಲು.
ಗಾಂಧಿ ಹಾಗೂ ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಮಾಜಿ ಅಧ್ಯಕ್ಷ ಮಾವೊ ಜೆಡಾಂಗ್ ಸಮಕಾಲೀನರಾಗಿದ್ದರೂ, ರಾಷ್ಟ್ರೀಯ ಸ್ವಾತಂತ್ರಕ್ಕಾಗಿ ಅವರಿಬ್ಬರೂ ವಿಭಿನ್ನ ತತ್ತ್ವಶಾಸಗಳನ್ನು ಪ್ರತಿಪಾದಿಸಿದ್ದರು. ಮಹಾತ್ಮಾ ಗಾಂ ಅಹಿಂಸಾ ಹೋರಾಟವನ್ನು ಪ್ರತಿಪಾದಿಸಿದ್ದರೆ, ಮಾವೊ ‘ಬಂದೂಕಿನ ನಳಿಕೆಯಿಂದ ಅಕಾರ ಹೊರಹೊಮ್ಮುತ್ತದೆ’ ಎಂಬ ಉಕ್ತಿಯನ್ನು ಬೆಂಬಲಿಸಿದ್ದರು.
ಚೀನಾದಲ್ಲಿ ರವೀಂದ್ರನಾಥ ಟಾಗೋರ್ ಹಾಗೂ ಜವಾಹರಲಾಲ್ ನೆಹರೂ ಗಾಂೀಜಿಯವರಿಗಿಂತಲೂ ಹೆಚ್ಚು ಜನಪ್ರಿಯರೆಂದು ಪರಿಗಣಿತರಾಗಿದ್ದಾರೆ. 2009ರಲ್ಲಿ ನಡೆಸಲಾದ ಜನಮತ ಗಣನೆಯೊಂದರಲ್ಲಿ, ಅವರಿಬ್ಬರು 60 ಮಂದಿ ವಿದೇಶಿ ನಾಯಕರಲ್ಲಿ ಹೆಚ್ಚು ಪ್ರಭಾವಶಾಲಿಗಳೆಂದು ಗುರುತಿಸಲ್ಪಟ್ಟಿದ್ದರು.
ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಕಳೆದ ವರ್ಷ ಅಹ್ಮದಾಬಾದ್ಗೆ ಭೇಟಿ ನೀಡಿದ್ದ ವೇಳೆ, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಬರಮತಿ ಆಶ್ರಮವನ್ನು ಸಂದರ್ಶಿಸಿದ್ದರು.
